ಬೆಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ, ಇಹ್ಸಾನ್ ಕರ್ನಾಟಕ ಅಧ್ಯಕ್ಷರು, ಎಸ್ ಎಸ್ ಎಫ್ ಮಾಜಿ ರಾಜ್ಯಾಧ್ಯಕ್ಷರಾದ ಮೌಲಾನಾ ಎನ್.ಕೆ.ಎಮ್.ಶಾಫಿ ಸಅದಿ ಕರ್ನಾಟಕ ರಾಜ್ಯ ವಕ್ಸ್ ಬೋರ್ಡ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವಕ್ಸ್ ಬೋರ್ಡ್ ಅಧ್ಯಕ್ಷರಾಗಿದ್ದ ಡಾ.ಮುಹಮ್ಮದ್ ಯುಸುಫ್ ರವರ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಬೆಂಗಳೂರು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ವಕ್ಸ್ ಬೋರ್ಡ್ ಕಛೇರಿಯಲ್ಲಿ ಚುನಾವಣೆ ನಡೆದಿತ್ತು . ಬೆಳಿಗ್ಗೆ 10 : 30 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಒಟ್ಟು ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಆದರೆ , ಅಂತಿಮವಾಗಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಶಾಫಿ ಸಅದಿಯವರು ನೂತನ ವಕ್ಸ್ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಎರಡು ಬಾರಿ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಶಾಫಿ ಸಅದಿಯವರು ಕರ್ನಾಟಕ ರಾಜ್ಯ ಸರಕಾರದಿಂದ ಕಳೆದ ಎರಡು ಅವಧಿಗೆ ರಾಜ್ಯ ವಕ್ಸ್ ಬೋರ್ಡ್ ಸದಸ್ಯರಾಗಿ ನಾಮ ನಿರ್ದೇಶನಗೊಂಡಿದ್ದರು.