dtvkannada

ಪುತ್ತೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಶಾಂತಿಮುಗೇರು- ಅಲಂಗಾರು ರಸ್ತೆಯಲ್ಲಿ ನಿನ್ನೆ ರಾತ್ರಿ ನಗದು ಹಾಗೂ ಅಗತ್ಯ ದಾಖಲೆಯಿದ್ದ ಬ್ಯಾಗೊಂದು ರಸ್ತೆ ಬದಿಯಲ್ಲಿ ಕೂರ ಮಸೀದಿಗೆ ಹೋಗುತ್ತಿದ್ದ ಸಅದಿಯಾ ದರ್ಸ್ ವಿದ್ಯಾರ್ಥಿಯಾಗಿರುವ ಸ್ಥಳೀಯ ನಿವಾಸಿ ಮಿದ್ಲಾಜ್ ಎಂಬವರಿಗೆ ಸಿಕ್ಕಿದೆ.

ಕೂಡಲೇ ಅದನ್ನು ಕೈಗೆತ್ತಿಕೊಂಡು ಮನೆಗೆ ಹೋದ ವಿದ್ಯಾರ್ಥಿ ಅದರಲ್ಲಿ ಬ್ಯಾಗ್ ವಾರಿಸುದಾರರ ಮಾಹಿತಿ ಏನಾದರೂ ಸಿಗಬಹುದೇ ಎಂದು ಓಪನ್ ಮಾಡಿ ನೋಡಿದಾಗ ಅದರಲ್ಲಿ ಒಂದಷ್ಟು ಹಣ, ಬ್ಯಾಂಕ್ , ಕಾರ್ಡ್ ಹಾಗೂ ಅಗತ್ಯ ದಾಖಲೆಗಳು ಹಾಗೂ ಒಂದು ಫೋನ್ ನಂಬರ್ ಸಿಕ್ಕಿದಾಗ ಕೂಡಲೇ ಅವರಿಗೆ ಕರೆ ಮಾಡಿ ವಿಷಯ ತಿಳಿಸಿ ರಾತ್ರಿಯೇ ಅದನ್ನು ವಾರೀಸುದಾರರಿಗೆ ಮುಟ್ಟಿಸಲು ಪ್ರಯತ್ನ ಪಟ್ಟಿದ್ದರು.

ಆದರೆ ಇಂದು ಬೆಳಗ್ಗೆ ಅವರನ್ನು ಬರಲು ಹೇಳಿ ಬ್ಯಾಗ್ ವಾರಿಸುದಾರರಾದ ದೀಪಕ್ ಎಂಬವರಿಗೆ ಸೇರಿದ ಬ್ಯಾಗ್ ನ್ನು ಮಿದ್ಲಾಜ್ ಅವರು ತನ್ನ ತಂದೆಯವರಾದ ಅಬ್ದುಲ್ಲ ನೂಜಲ್ತಡ್ಕರವರೊಂದಿಗೆ ಜೊತೆಯಾಗಿ ಅವರಿಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!