ಮಂಚಿ: “ಜನಾರೋಗ್ಯವೇ ರಾಷ್ಟ್ರ ಶಕ್ತಿ” ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶದಾದ್ಯಂತ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಭಾಗವಾಗಿ ಕುಕ್ಕಾಜೆ ಏರಿಯಾ ವತಿಯಿಂದ ಮ್ಯಾರಥಾನ್ ಜಾಥಾವನ್ನು ಕುಕ್ಕಾಜೆ ಚೆಕ್ ಪೋಸ್ಟ್ ನಿಂದ ಕುಕ್ಕಾಜೆ ಜಂಕ್ಷನ್ ವರೆಗೆ ನಡೆಸಲಾಯಿತು.
ಈ ಕಾರ್ಯಕ್ರಮವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಇದರ ರಾಜ್ಯ ನಾಯಕರಾದ ತಫ್ಸೀರ್ ಬೊಳಂತೂರು ರವರು ಧ್ವಜವನ್ನು ಶಫೀಕ್ ಕುಕ್ಕಾಜೆ ಇವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕುಕ್ಕಾಜೆ ಜಂಕ್ಷನ್ ನಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕುಕ್ಕಾಜೆ ಏರಿಯಾ ಅಧ್ಯಕ್ಷರಾದ ನಿಸಾರ್ ಕುಕ್ಕಾಜೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ತಫ್ಸೀರ್ ಬೊಳಂತೂರು ರವರು ಮಾತನಾಡಿ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು ನಂತರ ಮಾತನಾಡಿದ ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಕ್ಷೇತ್ರ ಸಮಿತಿ ಸದಸ್ಯರಾದ ಅಶ್ರಫ್ ಮಂಚಿ ಆತ್ಮರಕ್ಷಣೆಯ ಪ್ರಾಮುಖ್ಯತೆ ಬಗ್ಗೆ ಮಾತನಾಡಿದರು
ಈ ಕಾರ್ಯಕ್ರಮಕ್ಕೂ ಮುನ್ನ ಹಮೀದ್ ಬೊಳಂತೂರು ರವರ ನೇತೃತ್ವದಲ್ಲಿ ದೈಹಿಕ ವ್ಯಾಯಾಮ ಅಭ್ಯಾಸ ಸಾರ್ವಜನಿಕವಾಗಿ ನಡೆಸಲಾಯಿತು ಕಾರ್ಯಕ್ರಮವನ್ನು D N ಫಾರೂಕ್ ಮಂಚಿ ಸ್ವಾಗತಿಸಿ ನಿರೂಪಿಸಿದರು