dtvkannada

ಕಬಕ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಮ್ಯುನಿಟಿ ಡೆವಲಪ್ಮೆಂಟ್ ಕಬಕ ವತಿಯಿಂದ ಕೆಲೆಂಬಿ ಮತ್ತು ಅಲ್ ಅಮೀನ್ ಯಂಗ್ ಮೆನ್ಸ್ ಅಸೋಸಿಯೇಷನ್ (ರಿ)ಕಲ್ಲೇಗ ಇದರ ಸಹಯೋಗದೊಂದಿಗೆ ಮುರ ಶಾಂತಿನಗರ ಎಂಬಲ್ಲಿ ನಿರ್ಮಿಸಿದ ಒಟ್ಟು ಎರಡು ಮನೆಗಳ ಉದ್ಘಾಟನಾ ಸಮಾರಂಭ ನಡೆಯಿತು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಾದ ಯಾಸಿರ್ ಹಸನ್ ಉದ್ಘಾಟನೆ ನಡೆಸಿ,ಕಾರ್ಯಕರ್ತರ ಸೇವೆಯನ್ನು ಹಾಗೂ ದಾನಿಗಳ ಸಹಾಯವನ್ನು ಸ್ಮರಿಸಿ ಶ್ಲಾಘಿಸಿದರು.ಕೆಲೆಂಬಿ ಕೊಡಿಪ್ಪಾಡಿಯಲ್ಲಿ ಬಹು ಅಸ್ಸಯ್ಯದ್ ಇಬ್ರಾಹೀಮ್ ಪೂಕುಂಞಿ ತಂಙಳ್ ಉದ್ಯಾವರ ಮತ್ತು ಮುರ ಶಾಂತಿನಗರದಲ್ಲಿ ಅಸ್ಸಯ್ಯದ್ ಶರಫುದ್ದೀನ್ ತಂಙಳ್ ಸಾಲ್ಮರ ದುವಾಃ ನೆರವೇರಿಸಿ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷರಾದ ಜಾಬಿರ್ ಅರಿಯಡ್ಕ, ಸಹದಿಯ ಮದ್ರಸ ಶಾಂತಿನಗರದ ಮುಖ್ಯೋಪಾಧ್ಯಾಯರಾದ ಯಾಕೂಬ್ ದಾರಿಮಿ ವೀರಮಂಗಿಲ, ಅಲ್ ಅಮೀನ್ ಯಂಗ್ ಮನ್ಸ್ ಅಸೋಸಿಯೇಷನ್ (ರಿ) ಕಲ್ಲೇಗ ಇದರ ಪ್ರಧಾನ ಕಾರ್ಯದರ್ಶಿಯಾದ ಅಬೂ ತ್ವಾಹಿರ್, ಕಲ್ಲೇಗ ಜುಮಾಃ ಮಸೀದಿಯ ಕೋಶಾಧಿಕಾರಿ ಹಾಗೂ ದ.ಕ ಮುಸ್ಲಿಮ್ ಯುವಜನ ಪರಿಷತ್ ಇದರ ಅಧ್ಯಕ್ಷರಾದ ಅಶ್ರಫ್ ಕಲ್ಲೇಗ, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ರವರು ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯರಾದ ಶರೀಫ್ ಕೋಡಾಜೆ, ದ.ಕ ಜಿಲ್ಲಾ ಸಮಿತಿ ಸದಸ್ಯರಾದ ಝಕರಿಯಾ ಗೋಲ್ತಮಜಲು, ಎಸ್‌ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಕಬಕ ಡಿವಿಷನ್ ಅಧ್ಯಕ್ಷರಾದ ಶಮೀರ್ ಮುರ, ಮುರ ಏರಿಯಾ ಅಧ್ಯಕ್ಷರಾದ ಅಶ್ರಫ್ ಮುರ , ಪೋಳ್ಯಾ ಯುನಿಟ್ ಅಧ್ಯಕ್ಷರಾದ ಬದ್ರುದ್ದೀನ್ ಪೋಳ್ಯಾ,ಅಲ್-ಶಿಫಾ ರಿಲೀಫ್ ಫೌಂಡೇಶನ್ ಮುರ ಇದರ ಅಧ್ಯಕ್ಷರಾದ ಕರೀಮ್ ಬೀಟಿಗೆ ಸೇರಿದಂತೆ ಹಲವಾರು ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾ ವ್ಯಾಪ್ತಿಯಲ್ಲಿ ವಹಿಸಿಕೊಂಡಿರುವ ಒಟ್ಟು ಆರು ಮನೆಗಳ ನಿರ್ಮಾಣ ಕಾಮಗಾರಿಯಲ್ಲಿ ಎರಡು ಮನೆಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಂದೆ ಎಂದು ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷರಾದ ಜಾಬಿರ್ ಅರಿಯಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆಕೆಲೆಂಬಿಯಲ್ಲಿ ಇಕ್ಬಾಲ್ ಮುರ ಮತ್ತು ಶಾಂತಿನಗರದಲ್ಲಿ ಸಿದ್ದೀಕ್ ಬೀಟಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.

By dtv

Leave a Reply

Your email address will not be published. Required fields are marked *

error: Content is protected !!