dtvkannada

'; } else { echo "Sorry! You are Blocked from seeing the Ads"; } ?>

ಕೆಲವರಿಗಂತೂ ಸಾಮಾಜಿಕ ಜಾಲ ತಾಣಗಳಲ್ಲಿ ಕವನ ಬರೆಯುವುದು ಗೀಚುವುದು ಎಂದರೆ ತುಂಬಾ ಹವ್ಯಾಸ ಈ ತರ ಬರೆಯುವವರ ಬರಹಕ್ಕೆ ಒಂದಷ್ಟು ಮಂದಿ ಕಾಯುತ್ತಿರುವುದು ಅವರಿಗೆ ಅಭಿಮಾನಿಗಳಿರುವುದು ಸಹಜ. ನಾವೀಗ ಪರಿಚಯಿಸುವ ಈ ವ್ಯಕ್ತಿ ಬರೆಯುವ ಬರಹ, ಕವನ, ಲೇಖನಗಳೆಲ್ಲವೂ ಪುರಾತನ ಕಾಲದ ಇತಿಹಾಸ ತುಂಬಿದ ಗತಕಾಲದಿಂದ ಉಂಟಾದ ಇತಿಹಾಸಗಳನ್ನು ಹುಡುಕುತ್ತಾ, ಮೇಲುಕು ಹಾಕುತ್ತಾ, ಬರೆಯುತ್ತಾ, ಗೀಚುತ್ತಿರುವ ಬರಹಗಾರ. ಇವರ ಬರಹಕ್ಕೆ ಮಾರು ಹೋಗದವರೆ ಇಲ್ಲಾ ಅನ್ನಿಸುತ್ತೆ. ಎಲ್ಲರೂ ಮೆಚ್ಚುವಂತಹ ಬರಹಗಳೇ ಹೆಚ್ಚಾಗಿ ಇವರು ಅಕ್ಷರಗಳಲ್ಲಿ ಪೋಣಿಸುವುದು. ಅದರಲ್ಲೂ ಯುವಕರಿಂದಂತೂ ಇವರ ಬರಹ, ಕವನ, ಲೇಖನಗಳಿಗೆ ಜಾಲ ತಾಣಗಳಲ್ಲಿ ಕಮೆಂಟು ಲೈಕುಗಳ ಬರಪೂರವೇ ಹರಿದು ಬರುತ್ತಿದೆ ಅಂತಹ ವೈರಲ್ ಆದ ಕವನ ನಿಮ್ಮ ಮುಂದಿಡುತ್ತಿದ್ದೇವೆ.

ಹಳೇ ಕಾಲದ ಅಳತೆ ಮಾಪಕ ಈ ಕೊಂಡೆ..
ಈಗಲೂ ಹಲವು ಮನೆಗಳಲ್ಲಿ ಇರುವುದು ಕಂಡೆ..
ಇತಿಹಾಸ ಇಂದಿನವರಿಗೆ ಪಾಠ ಮತ್ತು ಮುಂದಿನವರಿಗೆ ದಾರಿದೀಪ ಅಂತ ತಿಳಿದುಕೊಂಡೆ
ಅಲ್ಪ ಅನುಭವದ ಅನನ್ಯ ಗಳಿಗೆಗಳನ್ನು ಅಕ್ಷರಗಳ ಮೂಲಕ ಹಂಚಿಕೊಂಡೆ

'; } else { echo "Sorry! You are Blocked from seeing the Ads"; } ?>

✍️ಎಸ್ ಪಿ ಬಶೀರ್ ಶೇಕಮಲೆ

ಅಂಗಡಿಗಳಲ್ಲಿ ಎಣ್ಣೆ ಅಳೆಯಲೂ
ಮನೆಗಳಲ್ಲಿ ಹಾಲು ಅಳೆಯಲೂ ಮಾಪಕವಾಗಿ ಹಿಂದಿನ ಕಾಲದಲ್ಲಿ ಜನರು ಉಪಯೋಗಿಸುತ್ತಿದ್ದ ಒಂದು ಅಳತೆ ಮಾಪಕ ಈ ಕೊಂಡೆ

'; } else { echo "Sorry! You are Blocked from seeing the Ads"; } ?>

ಬಾಲ್ಯದಲ್ಲಿಯೇ
ಆ ಕೊಂಡೆಯಲ್ಲಿ ನಾಲ್ಕು ಗೆರೆ ಕಂಡೆ

ಕೆಳಗಿನದ್ದು ಕಾಲು ಕೊಂಡೆ
ಮದ್ಯಕ್ಕೆ ಅರ್ದ ಕೊಂಡೆ
ನಂತರ ಮುಕ್ಕಾಲು ಕೊಂಡೆ
ಭರ್ತಿ ಆದಾಗ ಒಂದು ಕೊಂಡೆ

ಸಣ್ಣದರಲ್ಲಿಯೇ ಇದನ್ನೂ ತಿಳಿದುಕೊಂಡೆ
ಒಂದು ಲೀಟರ್ ಗೆ ಆರು ಕೊಂಡೆ
ಅರ್ಧ ಲೀಟರ್ ಗೆ ಮೂರು ಕೊಂಡೆ

ಆ ಕಾಲದ ಆಗರ್ಭ ಸಿರಿವಂತರೊಬ್ಬರ
ಮನೆ ನಮ್ಮ ಮನೆಯಿಂದ ಎರಡು ಮೈಲು ದೂರದಲ್ಲಿದ್ದಾಗ ಅಲ್ಲಿಂದ ಹಾಲು ತರಲು ಹೋಗುತ್ತಿದ್ದೆ ನಡೆದುಕೊಂಡೆ

ಮೊದ ಮೊದಲು ನಡೆದು ಹೋಗುತ್ತಿದ್ದದ್ದು ದೊಡ್ಡಕ್ಕಳ ಕೈ ಹಿಡಿದು ಕೊಂಡೆ
ನಂತರ ಸನ್ನಕ್ಕಳ ಜತೆ ಸೇರಿಕೊಂಡೆ
ಬಳಿಕ ನಾನೊಬ್ಬನೇ ಅಷ್ಟು ದೂರ ನಡೆದುಕೊಂಡು ಹೋಗಲು ಧೈರ್ಯ ಮಾಡಿ ಕೊಂಡೆ

ಆ ಸಿರಿವಂತ ಕುಟುಂಬ ತಮ್ಮ
ವಾಸ ಸ್ಥಳವನ್ನು ಅಲ್ಲಿಂದ ಬೇರೆ ಒಂದು ಕಡೆಗೆ ಬದಲಿಸಿದಾಗ ಅಲ್ಲಿಗೂ ಒಂದು ಮೈಲು ನಡೆದುಕೊಂಡು ಹೋಗಿ ಹಾಲು ತರಲು ಮನೆಯಲ್ಲಿ ಒಪ್ಪಿಕೊಂಡೆ

ಹಾಲು ತರಲು ಹೋಗುತ್ತಿದ್ದದ್ದು ಕೈಯಲ್ಲಿ ಒಂದು ಬಿಳಿ ಬಣ್ಣದ ಕುಪ್ಪಿ ಹಿಡಿದುಕೊಂಡೆ
ತದನಂತರ ನಮ್ಮ ತಂದೆಯವರಿಂದ ಹಳೆಯ ಹರ್ಕ್ಲಿಸ್ ಸೈಕಲ್ ಒಂದನ್ನು ಗಿಟ್ಟಿಸಿಕೊಂಡೆ

ಆಗ ಹಾಲು ತರಲೆಂದು ಸೈಕಲ್ ಗೆ ಒಂದು ಕಪ್ಪು ಬಣ್ಣದ ಕ್ಯಾನ್ ಕಟ್ಟಿ ಕೊಂಡೆ
ನಂತರ ಹಾಲು ತರಲು ಹೋಗುತ್ತಿದ್ದದ್ದು ಸೈಕಲ್ ತುಳಿದುಕೊಂಡೇ

ಮೊದಲು ಅಲ್ಲಿಂದಲೂ
ಬಳಿಕ ಇಲ್ಲಿಂದಲೂ
ಮೂರು ಕೊಂಡೆ ಹಾಲು ತರಲು ನಡೆದುಕೊಂಡು ಹೋಗಿ ತಿರುಗಿ ಮನೆಗೆ ಬರುತ್ತಿದ್ದದ್ದು ಆ ಸಿರಿವಂತರ
ಕರುಣಾಮಯಿ ಮಡದಿ
ಮಾಡಿ ಕೊಡುವ ನೀರು ಕಂಡಿರದ ಹಾಲಿನ ಚಾ ಕುಡಿದುಕೊಂಡೇ
ಮತ್ತು ಇಡ್ಲಿ,ಪಿಂಡಿ,ದೋಸೆ,ಕಲ್ತಪ್ಪೋ ಅಥವಾ ಏಳು ಗುಂಡಿಯ ಅಪ್ಪೊ ತಿಂದುಕೊಂಡೇ

ಕಾಲಾನಂತರ ನಮ್ಮ ಮನೆಯ ಹತ್ತಿರದ ಕೃಷಿಕ ಅಜ್ಜರ ಮನೆಯಿಂದ ಹಾಲು ತರಲು ಮನೆಯಿಂದ ಆಜ್ಞೆಯನ್ನು ಪಡೆದುಕೊಂಡೆ
ಮುಂದಿನ ದಿನಗಳಲ್ಲಿ ಹಾಲು ತರಲು ಹೋಗುವ ದಾರಿಯನ್ನು ಆಕಡೆ ಬದಲು ಈಕಡೆಗೆ ತಿರುಗಿಸಿಕೊಂಡೆ

ಆ ಅಜ್ಜರ ಪತ್ನಿ,
ಮನುಷ್ಯ ಸ್ನೇಹದ ಪ್ರತೀಕವಾದ ಮಹಿಳಾ ಮಣಿ ಅಜ್ಜಿ
ಅರ್ಧ ಲೀಟರ್ ಹಾಲು ಕೊಡುವಾಗ ಮೂರು ಕೊಂಡೆ ಹಾಕಿ ಕಮ್ಮಿಯಾಗದಿರಲಿ ದೇವರೇ ಅಂತ ಮತ್ತೂ ಅರ್ಧ ಕೊಂಡೆ ಹಾಲು ಹೆಚ್ಚುವರಿಯಾಗಿ ಕೊಡುತ್ತಿದ್ದದ್ದನ್ನು
ಈಗ ಮತ್ತೊಮ್ಮೆ ಮನದೊಳಗೆ ನೆನಪಿಸಿಕೊಂಡೆ….

ಇದು ಅವರ ಸೂಕ್ಷ್ಮತೆಯ ಪ್ರತಿಬಿಂಬ ಅಂತ ನಮ್ಮ ತಾಯಿ ಅಂದು ಹೇಳುತ್ತಿದ್ದ ಮಾತು ಕೇಳಿಸಿಕೊಂಡೆ

ಈಗ ಇದೆಲ್ಲವೂ ಇತಿಹಾಸ

ಇತಿಹಾಸ ಎನ್ನುವುದು
ಹಿಂದಿನ ಕಾಲದ ವಿದ್ಯಮಾನಗಳಷ್ಟೇ ಅಲ್ಲ
ಇಂದಿನ ಕಾಲದವರಿಗೆ ಪಾಠ
ಮತ್ತು ಮುಂದಿನ ಪೀಳಿಗೆಗೆ ದಾರಿದೀಪ ಎಂಬ ವಿದ್ವಾಂಸರೊಬ್ಬರ
ಅಮೃತ ನುಡಿ ಇತ್ತೀಚೆಗೆ ತಿಳಿದುಕೊಂಡೆ

ಆ ಮಹಾನ್ ಗುರುವರ್ಯರುಗಳ
ಅರ್ಥ ಗರ್ಭಿತ ಮಾತುಗಳು ನಮಗೆ ಎಂದೆಂದಿಗೂ ಪ್ರೇರಣೆ ಅಂತ ಮಗದೊಮ್ಮೆ ಮನದಾಳದೊಳಗೆ ದೃಢಪಡಿಸಿಕೊಂಡೆ

ಆ ಮಾತುಗಳ ಸಾಕ್ಷಾತ್ಕಾರಕ್ಕಾಗಿ
ಅಲ್ಪ ಸಮಯ ವಿನಿಯೋಗಿಸಿಕೊಂಡೆ

ಈ ಅಳತೆಯ ಕೊಂಡೆ
ಇತಿಹಾಸದ ಪುಟಗಳಲ್ಲಿ ಮಾಯದ ಅಕ್ಷರಗಳಾಗಿ
ಸುವರ್ಣ ಯುಗವೊಂದರ ಜೀವನ ಶೈಲಿಯ ಪಡಿಯಚ್ಚುಗಳಾಗಿ
ಕಳೆದು ಹೋದ ಕಾಲಘಟ್ಟ ಒಂದಕ್ಕೆ ಈಗಲೂ ಮೂಕ ಸಾಕ್ಷಿಯಾಗಿ
ಕಾಲ ಗರ್ಭದೊಳಗೆ ಲೀನವಾಗಿ ಹೋಯಿತು
ಎಂಬುದುನ್ನು ನಿಮ್ಮೊಂದಿಗೆ ಹಂಚಿಕೊಂಡೆ….

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!