ಕಣ್ಣೂರು: ನಿಂತಿದ್ದ ಲಾರಿಯೊಂದಕ್ಕೆ ಬೈಕ್ ಡಿಕ್ಕಿಯಾಗಿ ಬೈಕ್’ನಲ್ಲಿದ್ದ ದಂಪತಿಗಳು ಗಾಯಗೊಂಡ ಘಟನೆ ಅಡ್ಯಾರ್ -ಕಣ್ಣೂರು ಸಮೀಪ ನಡೆದಿದೆ.
ಅಪಘಾತದಲ್ಲಿ ಸೂರಿಕುಮೇರು ಪ್ರೌಡಶಾಲಾ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿರುವ ಮೂಲತಃ ಕಲ್ಲಡ್ಕ ನಿವಾಸಿ ಜಗದೀಶ್ ಕೆ ಹಾಗೂ ಅವರ ಪತ್ನಿ ಗಾಯಗೊಂಡಿದ್ದರು. ಮೊಣಕಾಲಿನ ಭಾಗಕ್ಕೆ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಜಗದೀಶ್ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರು ಯಾರೊಬ್ಬರೂ ಸಹಾಯಕ್ಕೆ ಬಂದಿರಲಿಲ್ಲ.
ಆ ಸಂದರ್ಭ ಅದೇ ದಾರಿಯಲ್ಲಿ ಹೋಗುತ್ತಿದ್ದ ಬ್ಲಡ್ ಹೆಲ್ಪ್ ಲೈನ್ ಕಾರ್ಯನಿರ್ವಾಹಕ, ಸಾಮಾಜಿಕ ಕಾರ್ಯಕರ್ತರಾದ ರಿಯಾಝ್ ಕಣ್ಣೂರು ಮತ್ತು ಅವರ ಗೆಳೆಯರೊಬ್ಬರು ತಕ್ಷಣ ತಮ್ಮ ಕಾರಿನಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಗೆ ಕುಟುಂಬದವರು ಆಗಮಿಸುವ ವರೆಗೂ ಆಸ್ಪತ್ರೆಯಲ್ಲೇ ಇದ್ದು ಮಾನವೀಯತೆ ಮೆರೆದಿದ್ದಾರೆ.