ಪುತ್ತೂರು, ನ 28 : ವರ್ತಕರ ಸಂಘ (ರಿ) ಕುಂಬ್ರ ಆಶ್ರಯದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ.) ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಇದರ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ದಿನಾಂಕ 28 ನವೆಂಬರ್ 2021 ನೇ ಆದಿತ್ಯವಾರದಂದು ಪುತ್ತೂರಿನ ಕುಂಬ್ರದಲ್ಲಿರುವ ನವೋದಯ ರೈತ ಸಭಾ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಕುಂಬ್ರ ಪ್ರಾಥಮಿಕ ಕೃಷಿ ಉತ್ಪನ್ನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ ಚಂದ್ರ ರೈ ಕೈಕಾರರವರು ಮಾತನಾಡಿ, ಒಂದು ಜೀವವು ಸಾವು ಬದುಕಿನ ಹೋರಾಟದಲ್ಲಿ ರಕ್ತ ಶ್ರೇಷ್ಠ ಪಾತ್ರ ವಹಿಸುತ್ತದೆ. ರಕ್ತದಾನ ಮಾಡುವುದರಿಂದ ಜೀವ ಉಳಿಸಬಹುದಾಗಿದೆ. ಕುಂಬ್ರ ವರ್ತಕರ ಸಂಘ ಆಯೋಜನೆ ಮಾಡಿದಂತಹ ರಕ್ತದಾನ ಶಿಬಿರ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕೆ.ಪಿ ಮಹಮ್ಮದ್ ಸಾದಿಕ್ ಹಾಜಿ ಆಕರ್ಷನ್ ಮಾತನಾಡಿ ರಕ್ತ ಕಂಡಾಗ ಓಡದೆ, ಅಗತ್ಯ ಹಾಗೂ ತುರ್ತು ಸಂದರ್ಭದಲ್ಸಿ ರಕ್ತದಾನ ಮಾಡಲು ಓಡಿಕೊಂಡು ಬರುವವರು ನಾವಾಗಬೇಕು ಎಂದರು. ಬಳಿಕ ರಕ್ತದಾನ ಮಾಡುವ ಮೂಲಕ ಜೀವದಾನಿಯಾದರು.
ಉದ್ಯಮಿ ಮೋಹನ್ ದಾಸ್ ರೈ, ವರ್ತಕ ಸಂಘದ ಗೌರವ ಸಲಹೆಗಾರರಾದ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಚಂದ್ರಕಾಂತ ಶಾಂತಿವನ, ನ್ಯಾಯಾವಾದಿ ದುರ್ಗಪ್ರಸಾದ್ ರೈ ಕುಂಬ್ರ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು. ಹಾಗೂ ಕಾರ್ಯಕ್ರಮವನ್ನು ಆಯೋಜಿಸಿದ ಆಯೋಜಕರಿಗೂ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಎಲ್ಲಾ ಕಾರ್ಯನಿರ್ವಾಹಕರ ಕಾರ್ಯವನ್ನು ಮೆಚ್ಚಿ ಶ್ಲಾಘಿಸಿದರು.
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಂಸ್ಥೆಯ ಕಾರ್ಯನಿರ್ವಾಹಕ ಇಮ್ರಾನ್ ಅಡ್ಡೂರು ಮಾತನಾಡಿ, ಸಂಸ್ಥೆಯ ಕಾರ್ಯವೈಕರಿಯ ಬಗ್ಗೆ ತಿಳಿಹೇಳಿದರು. ರಕ್ತದಾನ ಮಾಡಿ ಮಾನವೀಯತೆ ಮೆರೆದ ಊರಿನ ಸರ್ವ ಸಹೃದಯೀ ದಾನಿಗಳಿಗೂ, ರಕ್ತನಿಧಿಯ ಸಿಬ್ಬಂದಿ ವರ್ಗಕ್ಕೂ, ಮತ್ತು ಕಾರ್ಯಕ್ರಮದ ಯಶಸ್ವಿಗಾಗಿ ಹಗಲಿರುಳು ಶ್ರಮಿಸಿದ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ ಕೃತಜ್ಞತೆಗಳು ಸಲ್ಲಿಸಿದರು.
ವರ್ತಕ ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ್ ರೈ ಕೊಪ್ಪಳ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘ ನಡೆದು ಕೊಂಡು ಬಂದ ಹಾದಿ ಮತ್ತು ಸಂಘದಿಂದ ನಡೆದ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ವರ್ತಕ ಸಂಘದ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ ಸಭಾಧ್ಯಕ್ಷತೆ ವಹಿಸಿದ್ದರು. ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಇದರ ವೈದ್ಯಾಧಿಕಾರಿ ಡಾ.ಕರಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಪದಾಧಿಕಾರಿಗಳಾದ ಪುರಂದರ ರೈ ಕೋರಿಕ್ಕಾರ್, ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಮೊಂತೆರೋ, ಉದಯ ಆಚಾರ್ಯ ಕೃಷ್ಣನಗರ, ಜಯರಾಮ ಆಚಾರ್ಯ, ಬಶೀರ್, ಸುಂದರ್ ರೈ ಮಂದಾರ, ಸಂಶುದ್ದೀನ್ ಎ.ಆರ್, ದಿವಾಕರ ಶೆಟ್ಟಿ, ಶರತ್ ರೈ ದೇರ್ಲ ಅತಿಥಿಗಳಿಗೆ ಶಾಲು ಹಾಕಿ ಸ್ವಾಗತಿಸಿದರು.
ಪುತ್ತೂರು ಗ್ರಾಮಾಂತರ ಠಾಣಾ ಎಸ್.ಐ.ಉದಯರವಿಯವರು ರಕ್ತದಾನ ಶಿಬಿರಕ್ಕೆ ಭೇಟಿ ನೀಡಿ ಶುಭ ಹಾರೈಸಿದರು. ಕೈಮ್ ಬ್ರಾಂಚ್ ಸಬ್ ಇನ್ಸ್ಪೆಕ್ಟರ್ ಅಮೀನ್ ಅತಾರ್ ಹಾಗೂ ಪೇದೆ ವಿನೋದ್ ಕುಮಾರ್ ಸೇರಿದಂತೆ ಒಟ್ಟು 45 ಜನಸ್ನೇಹಿ ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಜೀವದಾನಿಯಾದರು.
ವರ್ತಕ ಸಂಘದ ಪ್ರ.ಕಾರ್ಯದರ್ಶಿ ಅಝರ್ ಷಾ ಕುಂಬ್ರ ಸ್ವಾಗತಿಸಿದರು. ಪದ್ಮನಾಭ ಆಚಾರ್ಯ ಪ್ರಾರ್ಥಿಸಿದರು. ಭವ್ಯ ರೈ ವಂದಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.