ಪುತ್ತೂರು: ವರ್ತಕರ ಸಂಘ (ರಿ) ಕುಂಬ್ರ ಆಶ್ರಯದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರವು ಕುಂಬ್ರ ರೈತ ಸಭಾಭವನದಲ್ಲಿ ನಾಳೆ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ರಕ್ತನಿಧಿ ಕೇಂದ್ರಗಳಲ್ಲಿ ಅತೀವ ರಕ್ತದ ಕೊರತೆ ಕಂಡುಬಂದಿದ್ದು, ಜೀವ ಜಲವಾಗಿರುವ ರಕ್ತ ಸಿಗಲು ರೋಗಿಗಳು ಹರಸಾಹಸ ಪಡುತ್ತಿದ್ದಾರೆ. ಈ ಹಿನ್ನೆಯಲೆಯಲ್ಲಿ ವರ್ತಕರ ಸಂಘ ಕುಂಬ್ರ ಇದರ ಆಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ.
ಕೋವಿಡ್ ಮೊದಲ ಡೋಸ್ ವ್ಯಾಕ್ಸಿನ್ ಪಡೆದವರಿಗೆ 14 ದಿನದ ನಂತರ ರಕ್ತದಾನ ಮಾಡಬಹುದಾಗಿದೆ.
ಕೊರೋನ ಮುಂಜಾಗೃತ ಕ್ರಮವಾಗಿ ನಡೆಯುವ ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ, ರಕ್ತದಾನ ಮಾಡುವ ಮೂಲಕ ವಿವಿಧ ರೀತಿಯ ರೋಗಕ್ಕೆ ತುತ್ತಾಗಿರುವ ರೋಗಿಗಳ ಜೀವವನ್ನು ಉಳಿಸಿ ಜೀವದಾನಿಯಾಗಬೇಕಾಗಿ ಸಂಘಟಕರು ತಿಳಿಸಿದ್ದಾರೆ.