ರೈಲುಗಳ ಬಗ್ಗೆ ಮಾಹಿತಿ :ಸಾಮಾನ್ಯವಾಗಿ ನಾವು ತುಂಬಾ ದೂರದ ಊರುಗಳಿಗೆ ಹೋಗಬೇಕಾದರೆ ಮೊದಲು ಯೋಚನೆ ಮಾಡುವುದು ಅದರ ಪ್ರಯಾಣದ ಖರ್ಚು ವೆಚ್ಚ.ದೂರದ ಊರು ಅಂದರೆ ಉದಾಹರಣೆ ಐನೂರು ಆರ್ನೂರು ಕಿ.ಮಿ ದೂರದ ಊರುಗಳಿಗೆ ಹೋಗಬೇಕಾದರೆ ಬಸ್ಸು,ಕಾರಿನಲ್ಲಿ ಸಾವಿರಾರು ರೂ.ಗಳನ್ನ ನೀಡಬೇಕಾಗುತ್ತದೆ.
ಇದಕ್ಕೆ ಅನುಕೂಲ ಇಲ್ಲದವರು ನೆಚ್ಚಿಕೊಳ್ಳುವುದು ರೈಲುಗಳನ್ನ.ಬಹುತೇಕ ಬಡ ಮತ್ತು ಮಧ್ಯಮ ವರ್ಗದ ಜನರು ಇದೇ ರೈಲುಗಳ ಮೂಲಕವೇ ತಮ್ಮ ಊರುಗಳಿಗೆ ತೆರಳುತ್ತಾರೆ.ಈ ರೈಲು ಸಾರಿಗೆಯಲ್ಲಿ ಹೆಚ್ಚು ಪ್ರಸಿದ್ದತೆ ಪಡೆದಿರುವುದು ಈ ರಾಜಧಾನಿ ಎಕ್ಸ್ ಪ್ರೆಸ್.ನಿಮಗೊಂದು ಅಚ್ಚರಿಯ ವಿಚಾರ ಏನೆಂದರೆ ಈ ರೈಲಿನ ಚಾಲಕರ ಸಂಬಳ ಎಲ್ಲರನ್ನ ಆಶ್ಚರ್ಯಗೊಳಿಸುವಷ್ಟಿದೆ ನೋಡೋದಕ್ಕೆ ಏನ್ ಆರಾಮ್ ಕೆಲಸ ಅನ್ನಿಸಬಹುದು.
ಆದರೆ ಇದರ ನಕರಾತ್ಮಕ ಅಂಶಗಳು ಕೂಡ ಅಷ್ಟೇ ಪರಿಣಾಮಕಾರಿಯಾಗಿರುತ್ತದೆ.ಈ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ಚಾಲಕರನ್ನ ಸ್ಥಳೀಯವಾಗಿ ಲೋಕೋಪೈಲಟ್ ಗಳು ಎಂದು ಕರೆಯಲಾಗುತ್ತದೆ.ಇವರಿಗೆ ಬರೋಬ್ಬರಿ ಒಂದು ಲಕ್ಷ ದವರೆಗೆ ವೇತನ ನೀಡಲಾಗುತ್ತದೆ.
ಕೇಂದ್ರ ಸರ್ಕಾರದಡಿಯಲ್ಲಿ ಬರುವ ಈ ಕೇಂದ್ರ ಸರ್ಕಾರದ ನೌಕರರಿಗೆ ಪ್ರತಿ ವರ್ಷ ವೇತನ ಹೆಚ್ಚಳ,ಭತ್ಯೆ ಸೇರಿದಂತೆ ಇನ್ನಿತರ ವೈಯಕ್ತಿಕ ಸೌಲಭ್ಯಗಳನ್ನ ನೀಡಲಾಗುತ್ತದೆ.ಈ ರೈಲು ಚಾಲಕರಿಗೆ ಇಷ್ಟೊಂದು ದೊಡ್ಡ ಮೊತ್ತದ ಸಂಬಳ ನೀಡಲು ಕಾರಣ ಏನಪ್ಪಾ ಅಂದರೆ,ರೈಲಿನಲ್ಲಿ ಸಾಮಾನ್ಯವಾಗಿ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ.
ಇಲ್ಲಿ ಪ್ರಯಾಣಿಕರು ನಿದ್ರೇ ಹೋದರು ಚಾಲಕರು ಒಂದು ಅರೆ ಕ್ಷಣವು ಅಲುಗಾಡಬಾರದು.ಇಡೀ ಟ್ರೈನಿನ ಮುಖ್ಯ ಆಧಾರ ಈ ಚಾಲಕನಾಗಿರುತ್ತಾನೆ.ಇವರಿಗೆ ಯಾವುದೇ ರೀತಿಯ ಒತ್ತಡದ ಜೀವನ ಇರಬಾರದು ಎಂದು ರೈಲ್ವೆ ಇಲಾಖೆಗೆ ಅತಿ ಹೆಚ್ಚು ವೇತನದ ಪರಿಕ್ರಮವನ್ನ ಅನುಸರಿಸುತ್ತಾರೆ.
ಭಾರತ ದೇಶದಲ್ಲಿ ದಿನವೊಂದಕ್ಕೆ ಸರಿ ಸುಮಾರು 14,300 ರೈಲುಗಳು ಪ್ರಯಾಣ ಮಾಡುತ್ತವೆ.ಮಾಹಿತಿಯ ಪ್ರಕಾರ ಭಾರತೀಯ ರೈಲ್ವೇ ಜಾಲತಾಣದ ಮೂಲಕ ದಿನಂಪ್ರತಿ ಬರೋಬ್ಬರಿ ಹನ್ನೆರಡು ಲಕ್ಷಕ್ಕೂ ಹೆಚ್ಚು ಜನರು ಟ್ರೈನ್ ಟಿಕೆಟ್ ಬುಕ್ಕಿಂಗ್ ಮಾಡುತ್ತಾರೆ.
ಎಷ್ಟೋ ಬಾರಿ ರೈಲ್ವೈ ಜಾಲತಾಣ ಸರ್ವರ್ ಡೌನ್ ಆಗಿ ಗೊಂದಲಗಳಾಗಿರುವ ಘಟನೆಗಳು ನಡೆಯುತ್ತಿಲೇ ಇರುತ್ತವೆ.ಇನ್ನು ಕೊಂಚ ರೈಲು ಪ್ರಯಾಣದ ಹಿನ್ನೆಲೆ ತಿಳಿಯುವುದಾದರೆ ಬೆಂಗಳೂರಿನ ವಸಂತ ನಗರದ ಬಳಿ ಇರುವ ದಂಡು ರೈಲ್ವೈ ಸ್ಟೇಶನ್ ಮೊದಲ ರೈಲ್ವೈ ಸಂಚಾರ ಆರಂಭವಾಗಿದ್ದಂತೆ.ಹೈದರಾಲಿ ಟಿಪ್ಪು ಸುಲ್ತಾನ್ ಕಾಲದಲ್ಲಿ ಬಂದೂಕು,ಮದ್ದು ಗುಂಡುಗಳನ್ನ ಸರಬರಾಜು ಮಾಡಲು ಈ ರೈಲಿನ ವ್ಯವಸ್ಥೆ ಆರಂಭಿಸಲಾಯಿತು.
ತದ ನಂತರ ಜನರು ಕೂಡ ಪ್ರಯಾಣಿಸುವ ಹಾಗೇ ಆಗಿದ್ದು ಈಗ ಇತಿಹಾಸ.ಇನ್ನು ಆರಂಭದ ದಿನಗಳಲ್ಲಿ ರೈಲಿನಲ್ಲಿ ಹೆಚ್ಚು ಜನರು ತುಂಬಿದಾಗ ಆನೆಗಳ ಸಹಾಯದಿಂದ ಜನರನ್ನ ನಿಯಂತ್ರಿಸಿ ಜನರನ್ನ ಒಳಗೆ ಕೂರಿಸುವಂತಾಗಿತ್ತಂತೆ.
ಆಂಧ್ರ ಪ್ರದೇಶದ ವೆಂಕಟ ನರಸಿಂಹರಾಜುಪೇಟ ರೈಲ್ವೈ ನಿಲ್ದಾಣ ಭಾರತದ ಅತಿದೊಡ್ಡ ರೈಲ್ವೇ ನಿಲ್ದಾಣವಾಗಿದೆ.ಒರಿಸ್ಸಾದ ಜೂಡ್ಸಾಗೂಡ್ ಅಲ್ಲಿರುವ ಐಬಿ ರೈಲು ನಿಲ್ದಾಣ ಭಾರತದ ಅತಿ ಚಿಕ್ಕ ರೈಲು ನಿಲ್ದಾಣವಾಗಿದೆ.
ನಮ್ಮ ಲೇಖನ ಉಪಯುಕ್ತವಾದ ಮಾಹಿತಿ ದಯವಿಟ್ಟು ನಿಮ್ಮ ಗೆಳೆಯ,ಗೆಳತಿಯರಿಗೆ ತಿಳಿಯಲಿ ಶೇರ್ ಮಾಡಿ. ಈ ನಮ್ಮ ಲೇಖನ ಇಷ್ಟವಾದಲ್ಲಿ ಲೈಕ್ ಮತ್ತು ಶೇರ್ ಮಾಡಿ.