';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಸುಳ್ಯಪದವು – ಕೌಡಿಚಾರು ಮಾರ್ಗದಲ್ಲಿ ದಿನನಿತ್ಯ ಸಾವಿರಾರು ಕಲ್ಲಿನ ಲಾರಿಗಳು ಯಾವುದೋ ಲಾರಿ ರೇಸ್ ನಡೆಯುವಂತೆ ಅಪರಿಮಿತ ವೇಗದಲ್ಲಿ ಸಂಚರಿಸುತ್ತಿದ್ದು, ಇದರಿಂದಾಗಿ ಸಾಕಷ್ಟು ಅಪಘಾತ ಪ್ರಕರಣಗಳು ನಡೆಯುತ್ತಿವೆ. ಹಲವು ಬಾರಿ ಈ ಕುರಿತು ಅವರ ಯೂನಿಯನ್ ಗಮನಕ್ಕೆ ತಂದರು ವೇಗದ ಮಿತಿಗೆ ಕಡಿವಾಣ ಬಿದ್ದಿಲ್ಲ. ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ವಿಧ್ಯಾರ್ಥಿಗಳು, ಕಾರ್ಮಿಕರು ರಸ್ತೆಯಲ್ಲಿ ಸಂಚರಿಸುತ್ತಿದ್ದು ಹೆಚ್ಚಿನ ದುರ್ಘಟನೆ ನಡೆಯುವ ಮುನ್ನ ಇದಕ್ಕೆ ಕಡಿವಾಣ ಹಾಕಬೇಕಾಗಿದೆ.
ಆದುದರಿಂದ ನಾಳೆ ದಿನಾಂಕ 4/12/2021 ರಂದು ಬೆಳಿಗ್ಗೆ 7.30 ಕ್ಕೆ ಸರಿಯಾಗಿ ಕೊಯಿಲದಲ್ಲಿ ಕಲ್ಲಿನ ಲಾರಿಗಳನ್ನು ತಡೆಹಿಡಿಯುವ ಮೂಲಕ ಪ್ರತಿಭಟನೆ ನಡೆಸಲಾಗುವುದು. ಸಾಮಾಜಿಕ ಕಾಳಜಿಯುಳ್ಳ ಪ್ರತಿಯೊಬ್ಬರೂ ನಾಳೆ 7.30 ಕ್ಕೆ ಸರಿಯಾಗಿ ಬಂದು ಸಹಕರಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ ಎಂದು ಆಯೋಜಕರು ಪ್ರಕಟನೆಗೆ ತಿಳಿಸಿದ್ದಾರೆ