ಮುಂಬೈ: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮುಹಮ್ಮದ್ ಸಿರಾಜ್ ಮತ್ತು ರವಿಚಂದ್ರನ್ ಅಶ್ವಿನ್ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಝಿಲ್ಯಾಂಡ್ ತನ್ನ ಮೊದಲ ಇನಿಂಗ್ಸ್ ನಲ್ಲಿ 62 ರನ್ ಗಳಿಸಿ ಆಲೌಟಾಗಿದೆ. ಭಾರತ 263 ರನ್ ಮುನ್ನಡೆ ಪಡೆದುಕೊಂಡಿದೆ.
ಭಾರತವನ್ನು ಮೊದಲ ಇನಿಂಗ್ಸ್ ನಲ್ಲಿ 325 ರನ್ ಗೆ ಕಟ್ಟಿಹಾಕಿದ ನ್ಯೂಝಿಲ್ಯಾಂಡ್ ಭಾರತದ ವೇಗಿ ಸಿರಾಜ್ ದಾಳಿಗೆ ತತ್ತರಿಸಿ 17 ರನ್ನಿಗೆ 3 ವಿಕೆಟ್ ಕಳೆದುಕೊಂಡಿತು. ಆರಂಭಿಕ ಬ್ಯಾಟರ್ ಗಳಾದ ವಿಲ್ ಯಂಗ್(4), ಟಾಮ್ ಲಥಾಮ್ (10)ಹಾಗೂ ರಾಸ್ ಟೇಲರ್ (1)ಬೇಗನೆ ವಿಕೆಟ್ ಕೈಚೆಲ್ಲಿದರು. ಮಿಚೆಲ್(8) ಹಾಗೂ ನಿಕೊಲ್ಸ್(7) ಕ್ರಮವಾಗಿ ಸ್ಪಿನ್ನರ್ ಗಳಾದ ಅಕ್ಷರ್ ಪಟೇಲ್ ಹಾಗೂ ಅಶ್ವಿನ್ ಗೆ ವಿಕೆಟ್ ಒಪ್ಪಿಸಿದರು.
ಅಶ್ವಿನ್ ನಾಲ್ಕು ವಿಕೆಟ್ ಪಡೆದು ಮಿಂಚಿದ್ದು, ಅಕ್ಷರ್ ಪಟೇಲ್ 2, ಜಯಂತ್ ಯಾದವ್ ಒಂದು ವಿಕೆಟ್ ಪಡೆದು ಮಿಂಚಿದರು.