ಮಂಗಳೂರು: ಮಂಗಳೂರು ನಗರ ಪೊಲೀಸ್ ದಕ್ಷಿಣ ಉಪವಿಭಾಗ ಕಂಕನಾಡಿ ನಗರ ಪೊಲೀಸ್ ಠಾಣೆ ಗರೋಡಿ ರವರ ವತಿಯಿಂದ meeting with ctizen ಕಣ್ಣೂರು ನಾಗರೀಕ ಸಮಾಜ ಆಯೋಜಿಸಿದ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆಯನ್ನು ತಡೆಗಟ್ಟುವ ಬಗ್ಗೆ ಮಾಹಿತಿ ಕಾರ್ಯಕ್ರಮವು ದಿನಾಂಕ 03-12-2021 ಶುಕ್ರವಾರ ಸಾಯಂಕಾಲ 5 ಗಂಟೆಗೆ ಸರಿಯಾಗಿ ಕಣ್ಣೂರಿನ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ನಡೆಯಿತು.
ಮಾದಕ ವಸ್ತುಗಳ ಮಾರಾಟ ಮತ್ತು ಮಾದಕ ವಸ್ತುಗಳ ಸೇವನೆಯನ್ನು ತಡೆಗಟ್ಟುವ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ನೀಡಿದರು. ಮಾದಕದ್ರವ್ಯ ವ್ಯಸನಿಗಲೇ ಎಚ್ಚರ ಎಚ್ಚರ ಎಚ್ಚರ ಎನ್ನುವ ಸಂದೇಶದೊಂದಿಗೆ, ಎಚ್ಚರಿಕೆಯ ಮಾಹಿತಿ ಹಾಗೂ ಹತ್ತು ಹಲವಾರು ಅಪರಾಧ ಕೃತ್ಯಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು.
ಸಭೆಯಲ್ಲಿ ಸಾರ್ವಜನಿಕರು ಕೂಡ ಮಾಹಿತಿ ಹಂಚಿಕೊಂಡರು.
ದಕ್ಷಿಣ ಉಪವಿಭಾಗದ ಐಪಿಎಸ್ ಗ್ರೇಡ್ ಪೊಲೀಸ್ ಅಧಿಕಾರಿ ಎಸಿಪಿ ರಂಜಿತ್ ಕುಮಾರ್ ಬಂಡಾರು, ಕಂಕನಾಡಿ ವೃತ್ತ ನಿರೀಕ್ಷಕ ಅಶೋಕ್, ಪೊಲೀಸ್ ಸಿಬ್ಬಂದಿಗಳು, ಸ್ಥಳೀಯ ಕಾರ್ಪೊರೇಟರ್ ಚಂದ್ರವತಿ, ಉದ್ಯಮಿ ಟಿಂಬರ್ ರಫೀಕ್, ಸಮಾಜ ಸೇವಕ ಎ ವನ್ ರಿಯಾಝ್ ಕಣ್ಣೂರು, ಸಾಮಾಜಿಕ ಕಾರ್ಯಕರ್ತ ಹಾಗೂ ರಾಜ್ಯ ಗೌರವ ಸಾಧಕ ಸನ್ಮಾನಿತ ಸೋಷಿಯಲ್ ಫಾರೂಕ್, sd ಶಾಕೀರ್, ಕಣ್ಣೂರು ಪ್ರದೇಶದ ಬಹುತೇಕ ನಾಗರಿಕರು, ಪೊಲೀಸ್ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕೊನೆಯಲ್ಲಿ ಸಭೆ ಧನ್ಯವಾದಗಳೊಂದಿಗೆ ಸಮಾಪ್ತಿಯಾಯಿತು.