ಬಂಟ್ವಾಳ: ಐತಿಹಾಸಿಕ ಅಜಿಲಮೊಗರು ಮಾಲಿದ ಉರೂಸ್ ಈ ಬಾರಿ ನೈಟ್ ಕರ್ಫ್ಯೂ ಹಿನ್ನಲೆ ಉದಾಯಸ್ತಮಾನವಾಗಿ ಆಚರಿಸಲಾಗುವುದು ಎಂದು ಬಾಬಾ ಫಕ್ರುದ್ದೀನ್ ಜಮಾಅತ್ ಸಮಿತಿ ಹೇಳಿಕೆ ನೀಡಿದೆ.

ಜನವರಿ 14 ರಿಂದ 18 ರ ವರೆಗೆ ಉದ್ದೇಶಿಸಿದ್ದ ಮಾಲಿದ ಉರೂಸ್ ನ ದಿನಾಂಕ ಮತ್ತು ಸಮಯವನ್ನು ಬದಲಾಯಿಸಿದ್ದು ಪೊಲೀಸರು ಅನುಮತಿ ನೀಡಿದರೆ ಯತಾ ಸ್ಥಿತಿಯಲ್ಲೇ ಉರೂಸ್ ಕಾರ್ಯಕ್ರಮ ಮುಂದುವರಿಸಲಾಗುವುದು ಎಂದು ಜಮಾಅತ್ ಕಮಿಟಿಯು ಡಿ.ಟಿವಿ ನ್ಯೂಸ್ ಗೆ ತಿಳಿಸಿದ್ದಾರೆ.
ನೈಟ್ ಕರ್ಫ್ಯೂ ಹಿನ್ನಲೆ ದಿನಾಂಕ ಮತ್ತು ಸಮಯಗಳಲ್ಲಿ ಒಂದಷ್ಟು ಬದಲಾವಣೆ ನಡೆಸಿದ್ದು ಜನವರಿ 16 ರಿಂದ ಕಾರ್ಯಕ್ರಮ ಆರಂಭಗೊಂಡು ಜನವರಿ 19ಕ್ಕೆ ಕೊನೆಗೊಳ್ಳುತ್ತದೆ.
ಈ ದಿನಗಳಲ್ಲಿ ಬೆಳಗ್ಗಿನ ಹೊತ್ತು ಕಾರ್ಯಕ್ರಮ ನಡೆಯಲಿದ್ದು. ರಾತ್ರಿ ಹೊತ್ತು ಯಾವುದೇ ಕಾರ್ಯಕ್ರಮ ನೈಟ್ ಕರ್ಫ್ಯೂ ಹಿನ್ನಲೆ ನಡೆಸುವ ಚಿಂತನೆಯಿಲ್ಲ ಎಂದು ಅವರು ಹೇಳಿದರು.
ಉರೂಸ್ ಕಾರ್ಯಕ್ರಮ ಯಾವ ರೀತಿ ಇರುತ್ತೇ?
16 ರಂದು ಬೆಳಿಗ್ಗೆ ಭಂಡಾರದ ಹರಕೆ ನಡೆಯಲಿದ್ದು ಆ ದಿನ ರಾತ್ರಿ 8 ಗಂಟೆ ಹೊತ್ತಿಗೆ ಭಂಡಾರದ ಮಾಲಿದ ವಿತರಣೆ ನಡೆಯಲಿದೆ.
17 ರಂದು ಬೆಳಿಗ್ಗೆಯಿಂದ ರಾತ್ರಿ 9 ರ ವರೆಗೆ ಪರ ಊರವರಿಂದ ಮಸೀದಿಗೆ ಮಾಲಿದ ಕೊಡುವಿಕೆ ನಡೆಯಲಿದ್ದು 18 ರಂದು ಬೆಳಿಗ್ಗೆ 10 ರಿಂದ ಮಾಲಿದ ವಿತರಣೆ ನಡೆಯಲಿದೆ.
19 ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ ವರೆಗೂ ಕಂದೂರಿ ವಿತರಣೆ ನಡೆಯಲಿದೆ.

ಮೊದಲು ನಿಗದಿಯಾಗಿದ್ದ ಮತ ಪ್ರಬಾಷಣಗಳೆಲ್ಲವನ್ನೂ ರದ್ದುಗೊಳಿಸಿದ್ದು.
ಪೊಲೀಸರು ಅನುಮತಿ ನೀಡಿದರೆ ಮುಂದುವರಿಸುವ ಸಾಧ್ಯತೆ ಹೆಚ್ಚು.
ಈ ಕಾರ್ಯಕ್ರಮಗಳೆಲ್ಲವೂ ಕೋವಿಡ್ ನಿಯಮಗಳಿಗೆ ಅನುಸಾರವಾಗಿ ನಡೆಯಲಿದ್ದು ಸಾರ್ವಜನಿಕರು ಸಹಕರಿಸುವಂತೆ ಅಜಿಲಮೊಗರು ಜಮಾಅತ್ ಸಮಿತಿ ಮನವಿ ಮಾಡಿದೆ.
ಅಂತೂ ಅಜಿಲಮೊಗರು ಇತಿಹಾಸ ಪ್ರಸಿದ್ಧ ಮಾಲಿದ ಉರೂಸ್ ಈ ಬಾರಿ ಬೆಳಿಗ್ಗಿನ ಹೊತ್ತು ನಡೆಯಲಿದ್ದು ಇದು ಅಜಿಲಮೊಗರುವಿನ ಚರಿತ್ರೆಯಲ್ಲೇ ಇದೇ ಮೊದಲ ಬಾರಿ.