dtvkannada

ಉಪ್ಪಿನಂಗಡಿ: ಪೆದಮಲೆಯಿಂದ ತೆಕ್ಕಾರು ವರೆಗೂ ಸಂಚರಿಸುವ ಲಾರಿಯಿಂದ ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲು ಮುಖ್ಯ ರಸ್ತೆಗೆ ಬಿದ್ದಿದ್ದು ದ್ವಿಚಕ್ರ ಸವಾರರು ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣಿಸುವ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ.



ರಸ್ತೆಗಳಲ್ಲಿ ಬಿದ್ದಿರುವ ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲುಗಳನ್ನು ತಕ್ಷಣವೇ ತೆರವುಗೊಳಿಸಿ ಜನರ ಜೀವಗಳನ್ನು ಉಳಿಸಬೇಕೆಂದು S.D.P.I ತೆಕ್ಕಾರು ನಿಯೋಗ ಇಂದು ತೆಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಮನವಿ ಮಾಡಿದರು.
ತಕ್ಷಣವೇ ತೆರವುಗೊಳಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.


S.D.P.I ಬೆಳ್ತಂಗಡಿ ತಾಲೂಕು ಸದಸ್ಯ ಇನಾಸ್ ರೋಡಿಗ್ರಸ್, SDPI ತೆಕ್ಕಾರು ಗ್ರಾಮ ಸಮಿತಿ ಅಧ್ಯಕ್ಷ ನಝೀರ್ ಬಾಜರ, ಗ್ರಾಮ ಸಮಿತಿ ಉಪಾಧ್ಯಕ್ಷ ನೌಷಾದ್ ಉಪಸ್ಥಿತರಿದ್ದರು.

By dtv

One thought on “ತೆಕ್ಕಾರು ಲಾರಿಯಿಂದ ಮುಖ್ಯ ರಸ್ತೆಗೆ ಬಿದ್ದ ಸಿಮೆಂಟ್ ಮಿಶ್ರಿತ ಜಲ್ಲಿಕಲ್ಲು; ತಕ್ಷಣವೇ ತೆರವುಗೊಳಿಸಲು SDPI ನಿಯೋಗದಿಂದ ತೆಕ್ಕಾರು ಪಂಚಾಯತ್ ಗೆ ಮನವಿ”
  1. D tv ಗೆ ಧನ್ಯವಾದಗಳು
    ಅಧ್ಯಕ್ಷರು SDPI ತೆಕ್ಕರು ಸಮಿತಿ
    ಅಬ್ದುಲ್ ನಝೀರ್

Leave a Reply

Your email address will not be published. Required fields are marked *

error: Content is protected !!