dtvkannada

ಬೆಂಗಳೂರು: ಸ್ಕೂಟರ್ ಮತ್ತು ಲಾರಿ ನಡುವೆ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸರಾವಾಗುತ್ತಿದ್ದ ರಿಯಾಲಿಟಿ ಶೋ ಸ್ಪರ್ದಿಯಾಗಿದ್ದ ಸಮನ್ವಿ(೬) ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.ಇಂದು ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ದ್ವಿಚಕ್ರ ವಾಹನದಲ್ಲಿ ಸಮನ್ವಿ ಹಾಗೂ ತಾಯಿ ಅಮೃತಾ ತೆರಳುತ್ತಿದ್ದರು. ಈ ವೇಳೆ ಸ್ಕೂಟರ್ಗೆ ಹಿಂದಿನಿಂದ ಲಾರಿ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಸಮನ್ವಿ ಮೃತಪಟ್ಟಿದ್ದಾಳೆ. ಅಮೃತಾ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಎಸ್.ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.ಕಲರ್ಸ್ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿಶೋ ಆರಂಭಗೊಂಡಿತ್ತು. ಈ ಕಾರ್ಯಕ್ರಮಕ್ಕೆ 6 ವರ್ಷದ ಸಮನ್ವಿ ಸ್ಪರ್ಧಿಯಾಗಿ ತೆರಳಿದ್ದಳು. ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡುರ ಮೊಮ್ಮಗಳು ಸಮನ್ವಿ. ತಾಯಿ ಅಮೃತಾ ಜತೆ ಅವರು ಈ ರಿಯಾಲಿಟಿಶೋಗೆ ಬಂದಿದ್ದರು.ಅಮೃತಾ ನಾಯ್ಡು ನಾಲ್ಕು ತಿಂಗಳ ಗರ್ಭಿಣಿ. ಅವರ ಪತಿ ರೂಪೇಶ್ ನಾಯ್ಡು ಅವರು ಖಾಸಗಿ ಕಂಪೆನಿ ಉದ್ಯೋಗಿಯಾಗಿದ್ದಾರೆ. ಇಂದು ಸಂಜೆ ಶಾಪಿಂಗ್ಗಾಗಿ ಅಮೃತಾ ಹಾಗೂ ಸಮನ್ವಿ ಬರುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.


ರಿಯಾಲಿಚಿ ಶೋಗೆ ಬರುವುದಕ್ಕೂ ಮೊದಲು ಮಾತನಾಡಿದ್ದ ಸಮನ್ವಿ, ‘ನನಗೆ ಅಮ್ಮ ಎಂದರೆ ತುಂಬಾನೇ ಅಚ್ಚುಮೆಚ್ಚು. ನಾನು ಅವಳನ್ನು ಜಾಸ್ತಿ ಪ್ರೀತಿ ಮಾಡುತ್ತೇನೆ. ಪಾರ್ಟಿಗೆ ಹೋಗ್ತಾರೆ. ಅಪ್ಪನ ಜತೆ ಹಣ ಶೇರ್ ಮಾಡ್ತಾರೆ. ಈ ಕಾರಣಕ್ಕೆ ನನಗೆ ಅವಳು ಹೆಚ್ಚು ಇಷ್ಟ’ ಎಂದು ಹೇಳಿಕೊಂಡಿದ್ದಳು. ಈಗ ಉಜ್ವಲ ಭವಿಷ್ಯ ಕಾಣಬೇಕಿದ್ದ ಅವಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ನಿಜಕ್ಕೂ ದುಃಖದ ಸಂಗತಿ.

ವೀಡಿಯೋ ನೋಡಿ

‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮಕ್ಕೆ ವೀಕ್ಷಕರು ಮನ ಸೋತಿದ್ದಾರೆ. ಕಿರುತೆರೆ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದ ಸೆಲೆಬ್ರಿಟಿಗಳು ಮತ್ತು ಅವರ ಮಕ್ಕಳು ಈ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಖ್ಯಾತ ನಿರೂಪಕ ಸೃಜನ್ ಲೋಕೇಶ್, ನಟಿಯರಾದ ಅನುಪ್ರಭಾಕರ್ ಮತ್ತು ತಾರಾ ಅನುರಾಧಾ ಅವರು ಈ ಕಾರ್ಯಕ್ರಮದ ಜಡ್ಜ್ ಆಗಿದ್ದಾರೆ. ಪುಟಾಣಿಗಳ ಕಲರವದಿಂದ ವೀಕ್ಷಕರಿಗೆ ಮಸ್ತ್ ಮನರಂಜನೆ ಸಿಗುತ್ತಿದೆ. ಅನುಪಮಾ ಗೌಡ ಅವರು ನಿರೂಪಣೆ ಮಾಡುತ್ತಿದ್ದಾರೆ

By dtv

Leave a Reply

Your email address will not be published. Required fields are marked *

error: Content is protected !!