ಮದುವೆಯ ರಿಸೆಪ್ಷನ್ಗೆ ಬುರ್ಖಾ ಧರಿಸಿ ಬಂದಿದ್ದ ಮಹಿಳೆಯೊಬ್ಬರು ವರನನ್ನು ಪದೇಪದೆ ತಬ್ಬಿಕೊಳ್ಳುತ್ತಿದ್ದಳು. ಗಂಡನನ್ನು ಯಾರೋ ಮಹಿಳೆ ಬಂದು ಅಪ್ಪಿಕೊಂಡಿದ್ದರಿಂದ ವಧುವಿಗೆ ತಳಮಳ ಶುರುವಾಗಿತ್ತು. ನಂತರ ಆ ಮಹಿಳೆ ತನ್ನ ಮುಖದ ಮೇಲಿನ ಮುಸುಕನ್ನು ತೆಗೆದುಹಾಕಿದ್ದಾಳೆ. ಆ ಬುರ್ಖಾಧಾರಿ ಮಹಿಳೆಯಲ್ಲ ಗಂಡು ಎಂದು ಗೊತ್ತಾದ ನಂತರ ಅಲ್ಲಿದ್ದ ಎಲ್ಲರೂ ನಕ್ಕು ನಕ್ಕು ಸುಸ್ತಾಗಿದ್ದಾರೆ.

ಬುರ್ಖಾ ಧರಿಸಿದ ಮಹಿಳೆ ವಧು-ವರರನ್ನು ಅಭಿನಂದಿಸಲು ವೇದಿಕೆಯನ್ನು ತಲುಪಿದ್ದರು. ಈ ವೇಳೆ ಆ ಮಹಿಳೆ ವರನನ್ನು ಪದೇಪದೆ ತಬ್ಬಿಕೊಂಡಿದ್ದಾಳೆ. ವಧುವಿಗೆ ವಿಷ್ ಮಾಡಿದ ಆಕೆ ಮದುಮಗನನ್ನು ಅಪ್ಪಿಕೊಂಡಿದ್ದಾಳೆ. ಅದನ್ನು ನೋಡಿ ವಧುವೂ ಶಾಕ್ ಆಗಿದ್ದಾಳೆ.
ಪದೇಪದೆ ಆ ಬುರ್ಖಾಧಾರಿ ತನ್ನ ಗಂಡನನ್ನು ಅಪ್ಪಿಕೊಂಡಿದ್ದನ್ನು ನೋಡುತ್ತಾ ನಿಂತಿದ್ದ ಆ ವಧುವಿನ ಎದುರು ಬುರ್ಖಾಧಾರಿ ತನ್ನ ಮುಸುಕನ್ನು ತೆಗೆದಿದ್ದಾರೆ. ವಾಸ್ತವವಾಗಿ, ವರನ ಸ್ನೇಹಿತ ಬುರ್ಖಾ ಧರಿಸಿ ಪ್ರಾಂಕ್ ಮಾಡಲು ವೇದಿಕೆ ಮೇಲೇರಿದ್ದ. ಬುರ್ಖಾದಲ್ಲಿ ವರನ ಸ್ನೇಹಿತರನ್ನು ನೋಡಿ, ಅಲ್ಲಿ ವಧು-ವರರು ಶಾಕ್ ಆಗಿದ್ದಾರೆ. ಇದೆಲ್ಲವನ್ನೂ ನೋಡಿ ಸಂಬಂಧಿಕರು ಮತ್ತು ಅತಿಥಿಗಳು ನಕ್ಕು ಎಂಜಾಯ್ ಮಾಡಿದ್ದಾರೆ.
https://www.instagram.com/reel/CYV9gaLpMKL/?utm_source=ig_web_copy_link
ಬುರ್ಖಾ ಧರಿಸಿ ಈ ರೀತಿಗಳ ನಾಟಕ ಮಾಡೋದರಿನ್ದ ಅದು ಜನ ಮನಸ್ಸುಗಲ್ಲಿ ತಪ್ಪು ಕಲ್ಪನೆಗಳನ್ನು ಸ್ರ್ಸ್ ಸ್ಟಿಸುತ್ತಿದೆ. ಇಂತಹ ಕ್ರತ್ಯಗಳಿಗೆ ಬೆಂಬಲಿಸದಿರಿ….