dtvkannada

ಕೇಪ್ ಟೌನ್ನಲ್ಲಿ ನಡೆದ ಟೆಸ್ಟ್ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಭಾರತವನ್ನು 7 ವಿಕೆಟ್ ಗಳಿಂದ ಸೋಲಿಸಿ 2-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಪಂದ್ಯದ ನಾಲ್ಕನೇ ದಿನದಂದು, ದಕ್ಷಿಣ ಆಫ್ರಿಕಾ ಗೆಲುವಿಗೆ 111 ರನ್‌ಗಳ ಅಗತ್ಯವಿತ್ತು ಹಾಗೂ ಭಾರತವು 8 ವಿಕೆಟ್‌ಗಳನ್ನು ಪಡೆಯಬೇಕಾಗಿತ್ತು. ಆದರೆ ಕೀಗನ್ ಪೀಟರ್ಸನ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರ ಅಮೋಘ ಇನ್ನಿಂಗ್ಸ್‌ನ ನೆರವಿನಿಂದ ದಕ್ಷಿಣ ಆಫ್ರಿಕಾ ಈ ಗುರಿಯನ್ನು ಸಾಧಿಸಿದೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ, ಭಾರತ ತಂಡವು 2018 ರ ನಂತರ ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿತ್ತು. ಈ ಬಾರಿ ಭಾರತ ತಂಡವು ಐತಿಹಾಸಿಕ ಸರಣಿ ತಮ್ಮತಾಗಿಸುತ್ತೆ ಎಂದು ಪರಿಗಣಿಸಲಾಗಿತ್ತು. ಎಬಿ ಡಿವಿಲಿಯರ್ಸ್, ಫಾಫ್ ಡು ಪ್ಲೆಸಿಸ್ ಮತ್ತು ಹಾಶಿಮ್ ಆಮ್ಲಾ ಅವರಂತಹ ಅನುಭವಿ ಬ್ಯಾಟ್ಸ್‌ಮನ್‌ಗಳ ನಿವೃತ್ತಿಯಿಂದಾಗಿ ದಕ್ಷಿಣ ಆಫ್ರಿಕಾ ತಂಡವು ಹೆಚ್ಚು ಬಲಿಷ್ಠವಾಗಿ ಕಾಣಲಿಲ್ಲ. ನಂತರ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಕೂಡ ಮೊದಲ ಟೆಸ್ಟ್ ನಂತರ ನಿವೃತ್ತಿಯಾಗುವ ಮೂಲಕ ಅಚ್ಚರಿ ಮೂಡಿಸಿದರು.
ಅದೇ ಸಮಯದಲ್ಲಿ, ಬಿರುಗಾಳಿಯ ವೇಗದ ಬೌಲರ್ ಎನ್ರಿಕ್ ನಾರ್ಕಿಯಾ ಗಾಯದ ಕಾರಣದಿಂದ ಸರಣಿಯಿಂದ ಹೊರಗುಳಿದಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಭಾರತ ತಂಡದ ಗೆಲುವು ಸುಲಭವೆಂದು ಪರಿಗಣಿಸಲ್ಪಟ್ಟಿತು. ಆದರೆ ವಾರಗಳಲ್ಲಿ ಎಲ್ಲಾ ಊವಾಪೋಹಗಳು ತಲೆಕೆಳಗಾಗಿವೆ.
ಭಾರತ ನೀಡಿದ 212 ರನ್ ಗುರಿಯನ್ನು ಸುಲಭವಾಗಿ ಮುಟ್ಟಿದ್ದಾರೆ.

ಭಾರತದ ಬ್ಯಾಟಿಂಗ್ ಮತ್ತೆ ಕಳಪೆ:
ಪಂದ್ಯದ ಮೂರನೇ ದಿನ ಭಾರತದ ಬ್ಯಾಟಿಂಗ್ ಮತ್ತೆ ಕಳಪೆಯಾಗಿದ್ದು, ರಿಷಬ್ ಪಂತ್ ಅವರ ಅಮೋಘ ಶತಕದ ಆಧಾರದ ಮೇಲೆ ಟೀಂ ಇಂಡಿಯಾ ಕೇವಲ 198 ರನ್ ಗಳಿಸಿ ದಕ್ಷಿಣ ಆಫ್ರಿಕಾದ ಮುಂದೆ 212 ರನ್‌ಗಳ ಸಾಧಾರಣ ಗುರಿಯನ್ನು ನೀಡಿತು.
ಮೂರನೇ ದಿನದಂತ್ಯಕ್ಕೆ ದಕ್ಷಿಣ ಆಫ್ರಿಕಾ 2 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿ ಗೆಲುವಿಗೆ ಅಡಿಪಾಯ ಹಾಕಿತ್ತು. ಇಂತಹ ಪರಿಸ್ಥಿತಿಯಲ್ಲಿ ನಾಲ್ಕನೇ ದಿನ ಭಾರತಕ್ಕೆ ಚೆಂಡಿನ ವರ್ಚಸ್ಸು ಬೇಕಿತ್ತು ಆದರೆ ಆಗಲಿಲ್ಲ.

ಪಂದ್ಯದ ಮೊದಲ ಇನ್ನಿಂಗ್ಸ್‌ನಂತೆ ಮತ್ತೊಮ್ಮೆ ದಕ್ಷಿಣ ಆಫ್ರಿಕಾದ ಹೊಸ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ ಕೀಗನ್ ಪೀಟರ್ಸನ್ ಅಮೋಘ ಇನ್ನಿಂಗ್ಸ್ ಆಡಿದರು. ಪೀಟರ್ಸನ್ ಮೂರನೇ ದಿನದಲ್ಲಿಯೇ 48 ರನ್ ಗಳಿಸಿದ್ದರು ಮತ್ತು ನಾಲ್ಕನೇ ದಿನದ ಮೊದಲ ಸೆಷನ್‌ನಲ್ಲಿ ವೇಗವಾಗಿ ಬ್ಯಾಟಿಂಗ್ ಮಾಡಿದರು. ಪಂದ್ಯದಲ್ಲಿ ತಮ್ಮ ಎರಡನೇ ಅರ್ಧಶತಕ ಮತ್ತು ಸರಣಿಯಲ್ಲಿ ಮೂರನೇ ಬಾರಿಗೆ ಗಳಿಸಿದರು. ಪೀಟರ್ಸನ್ ರಾಸಿ ವ್ಯಾನ್ ಡೆರ್ ಡುಸ್ಸೆನ್ ಜೊತೆ 54 ರನ್ ಜೊತೆಯಾಟವನ್ನು ಹಂಚಿಕೊಂಡರು.

ಆದಾಗ್ಯೂ, ಮೊದಲ ಸೆಷನ್ ಆರಂಭದಲ್ಲಿ ಭಾರತಕ್ಕೆ ಉತ್ತಮ ಅವಕಾಶವಿತ್ತು, ಆದರೆ ಚೇತೇಶ್ವರ ಪೂಜಾರ ಪೀಟರ್ಸನ್ ಅವರ ಸರಳ ಕ್ಯಾಚ್ ಅನ್ನು ಕೈಬಿಟ್ಟರು. ಶಾರ್ದೂಲ್ ಠಾಕೂರ್ ಪೀಟರ್ಸನ್ ಅವರ ವಿಕೆಟ್ ಪಡೆದು ಸ್ಮರಣೀಯ ಶತಕದಿಂದ ಅವರನ್ನು ತಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ 72 ರನ್ ಗಳಿಸಿದ್ದ ಪೀಟರ್ಸನ್ 113 ಎಸೆತಗಳಲ್ಲಿ 82 ರನ್ ಗಳಿಸಿ ತಮ್ಮ ಅತ್ಯುತ್ತಮ ಸ್ಕೋರ್ ಮಾಡಿದರು.

By dtv

Leave a Reply

Your email address will not be published. Required fields are marked *

error: Content is protected !!