ಸಾಮಾನ್ಯವಾಗಿ ಕಾಡುಗಳಲ್ಲಿ ಪ್ರಾಣಿಗಳ ನಡುವೆ ಜಗಳ ಕಿತ್ತಾಟ ಸಹಜ. ಆದರೆ ಜೀವ ತೆಗೆಯುವ ಪ್ರಾಣಿಗಳು ಎದುರು ಬಂದರೆ ಎಂದಿಗೂ ತಮ್ಮ ಜಾತಿಯನ್ನು ಪ್ರಾಣಿಗಳು ಬಿಟ್ಟುಕೊಡುವುದಿಲ್ಲ. ಅದಕ್ಕೆ ನಿದರ್ಶನ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಸಿಂಹ ಭೇಟೆಯಾಡಲು ಬಂದ ಎಮ್ಮೆಯನ್ನು ಮತ್ತೊಂದು ಎಮ್ಮೆ ರಕ್ಷಿಸಿದ ಭಯಾನಕ ವಿಡಿಯೋ ವೈರಲ್ ಆಗಿದೆ.
ಇನ್ಸ್ಗಾಗ್ರಾಮ್ನಲ್ಲಿ ವಿಡಿಯೋ ವೈರಲ್ ಆಗಿದೆ. ವೈಲ್ಡ್ ಆನಿಮಲ್ ಕ್ರಿಯೇಶನ್ ಎನ್ನುವ ಇನ್ಸ್ಟಾಗ್ರಾಮ್ ಖಾತೆ ವಿಡಿಯೋವನ್ನು ಹಂಚಿಕೊಂಡಿದೆ. ಸದ್ಯ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವಿಡಿಯೋದಲ್ಲಿ ಎಮ್ಮೆಯೊಂದು ಮಲಗಿರುವುದನ್ನು ಕಾಣಬಹುದು. ಆ ಎಮ್ಮೆಯ ಬಳಿ ಸಿಂಹ ನಿಂತಿರುತ್ತದೆ. ತಕ್ಷಣ ಇನ್ನೊಂದು ಎಮ್ಮೆ ಬಂದು ಸಿಂಹವನ್ನು ತನ್ನ ಕೋಡಿನಲ್ಲಿ ಎತ್ತಿ ಬಿಸಾಕುವುದನ್ನು ಕಾಣಬಹುದು. ತನ್ನ ಸಹಚರ ಎಮ್ಮೆಯನ್ನು ರಕ್ಷಿಸಲು ಮತ್ತೊಂದು ಎಮ್ಮೆ ಸಿಂಹದ ಹೊಟ್ಟೆಗೆ ಕೊಂಬು ಹಾಕಿ ಎತ್ತಿ ಪಕ್ಕಕ್ಕೆ ಬಿಸಾಡುತ್ತದೆ. ಈ ಭಯಾನಕ ವಿಡಿಯೋ ಎಂತಹವರನ್ನೂ ಒಂದು ಬಾರಿ ಬೆಚ್ಚಿ ಬೀಳಿಸುತ್ತದೆ.
ವಿಡಿಯೋ ನೋಡಿ ನೆಟ್ಟಿಗರು ಕಣ್ಣರಳಿಸಿದ್ದು, ಎಮ್ಮೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ನೋಡಿದ ಬಳಕೆದಾರರು ಪ್ರೊಟೆಕ್ಟಿವ್ ಹಾಗೂ ಸ್ನೇಹಿತನನ್ನು ಪ್ರೀತಿಸುವ ಎಮ್ಮೆಯನ್ನು ನೋಡಿ ಶ್ಲಾಘಿಸಿದ್ದಾರೆ.