dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ಸಿಂಗರ್ಸ್ ಪ್ರೇಮಿಯರ್ ಲೀಗ್ ಮಂಗಳೂರು ಇದರ ಆಶ್ರಯದಲ್ಲಿ ಎರಡನೇಯ ವರ್ಷದ ಸಿಂಗರ್ಸ್ ತಂಡ, CFM ತಂಡ ಹಾಗೂ ಪೊಲೀಸ್ ತಂಡದ ನಡುವಿನ ಕ್ರಿಕೆಟ್ ಪಂದ್ಯಾಟ ಇದೇ ಬರುವ 25-01-2021 ರಂದು ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿದೆ.

ಮಂಗಳವಾರ ಮಂಗಳೂರಿನ ನೆಹರು ಮೈದಾನದಲ್ಲಿ ಕೋಸ್ಟಲ್ ಫ್ರೆಂಡ್ಸ್ ಮಂಗಳೂರು vs Mangalore Police Commissioner ತಂಡ ಹಾಗೂ ಕೇರಳ-ಕರ್ನಾಟಕದ ಗಾಯಕರ ತಂಡಗಳೊಡನೆ SPL 22 ಲೀಗ್ ಕ್ರಿಕೆಟ್ ಟ್ರೋಫಿಗಾಗಿ ಸೆಣಸಾಡಲಿದೆ. ಪಂದ್ಯಾಕೂಟವನ್ನು ಅಭಿಮತ ಯೂಟ್ಯೂಬ್ ಚಾನೇಲ್ ಮೂಲಕ ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ ಎಂದು ಸಂಘಟಕರಾದ ಇಕ್ಬಾಲ್ ಪರ್ಲ್ಯ ತಿಳಿಸಿದ್ದಾರೆ.

'; } else { echo "Sorry! You are Blocked from seeing the Ads"; } ?>

ಕೋಸ್ಟಲ್ ಫ್ರೆಂಡ್ಸ್ ಮಂಗಳೂರು ಕ್ರಿಕೆಟ್ ತಂಡದ ಬಗ್ಗೆ ಒಂದಷ್ಟು ವಿವರಗಳು;

ರೀಯಾಝ್ ಏ-ವನ್ (A1 Cabz) ಕಣ್ಣೂರು ದ.ಕ ಮಾಲಕತ್ವದ ತಂಡ ಸಿರಾಜ್ ಪರ್ಲಡ್ಕರವರ ನಿರ್ದೇಶನ ಹಾಗೂ ಷರೀಫ್ ವಲಾಲ್ ಎಂಬ ಮಾಜಿ ದೈತ್ಯ ಹೊಡಿಬಡಿ ಆಟಗಾರ ತರಭೇತಿಯಲ್ಲಿ ಕಣಕ್ಕೆ ಇಳಿಯಲಿದೆ. ಲಕ್ಕಿ ಕ್ಯಾಪ್ಟನ್ ಖ್ಯಾತಿಯ ಫೈಝಲ್ ರೆಹಮಾನ್ ಯಾನೆ ಫೈಝಲ್ ಪುಮಾ ಸಾರಥ್ಯದಲ್ಲಿ ‌ಹಾಗೂ ಉಪ ಕಪ್ತಾನ ರಫೀಕ್ ಮಾಸ್ಟರ್ (ಸರ್ಕಾರಿ ಪ್ರೌಡ ಶಾಲೆ ನಾರ್ಶ) ಬಂಟ್ವಾಳ ತಾಲೂಕು (ದ.ಕ) ಇವರ ನೇತ್ರತ್ವದಲ್ಲಿ ಆಟಗಾರರು ಸಜ್ಜುಗೊಳ್ಳಲಿದ್ದಾರೆ. ಕಳೆದ ಸರಣಿಯಲ್ಲಿ ಕ್ಲಾಸ್ ಆಗಿ ಆಡಿದ ನಾಯಕ ಈ ಸಲ ಹೋಮ್ ಗ್ರೌಂಡ್‌ನಲ್ಲಿ ಮಾಸಾಗಿ ಮಿಂಚುವ ಭರವಸೆ ಇದೆ‌. ಯಾಕೆಂದರೆ ಬ್ಯಾಟಿಂಗ್ ವಿಭಾಗದಲ್ಲಿ ಈಗಾಗಲೇ ದೆವದತ್ ಪಡಿಕ್ಕಲ್ ಎಂಬ ಐಪಿಎಲ್ ಸ್ಟಾರ್‌ನನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ ಕೀರ್ತಿಗೆ ಭಾಜನರಾದ ಇಮ್ತಿಯಾಝ್ (Founder of MPL) ಹಜಾಜ್ ಗೋಲ್ತಮಜಲು ಅವರು ಇರಲಿದ್ದಾರೆ. ಈ ಮಧ್ಯೆ ತುಸು ಕೈಗೆ ಮಾಡಿಕೊಂಡ ಇಮ್ತಿಯಾಝ್ ಆಡುವ ಬಗ್ಗೆ ಅನುಮಾನವಿದ್ದರೂ ತರಭೇತಿ ನೀಡಲು ಅನುಮಾನವಿಲ್ಲ. ಕಳೆದ CFM ಲೀಗ್ ಸರಣಿಯಲ್ಲಿ ವೇಗವಾಗಿ ಅರ್ಧ ಶತಕ ಬಾರಿಸಿದ ರಫೀಕ್ ಮಾಸ್ಟರ್ ಮತ್ತದೆ ಫಾರ್ಮ್‌ನಲ್ಲಿ ಮುಂದುವರೆಯುವ ಬಗ್ಗೆ ಯಾವುದೇ ಅನುಮಾನಗಳಿಲ್ಲ. ನೌಫಲ್ ಎಫ್‌ಎನ್, ಸಿಯಾಬ್ ಪಾಟ್ನರಂತಹ ಸೂಪರ್ ಸ್ಟ್ರೈಕರ್‌ಗಳು ಸಕಲ ಸಿದ್ಧತೆಯೊಂದಿಗೆ ಇರುವಾಗ ತಂಡಕ್ಕೆ‌ ಮತ್ತಷ್ಟು ಶಕ್ತಿ ತುಂಬಿದೆ.

'; } else { echo "Sorry! You are Blocked from seeing the Ads"; } ?>

ಶರೀಫ್ ಕಡಬ, ಸಮೀರ್ ಮಾರಿಪಲ್ಲ, ಅನೀಶ್, ಶಂಸೀರ್ ಮಾರಿಪ್ಪಲ್ಲ ನಾಲ್ವರು ಮಿಡಲ್ ಆರ್ಡರ್ ಶಕ್ತಿಗಳು ಕೋಸ್ಟಲು ಮಂಗಳೂರಿನ ಶಕ್ತಿಯ ಮತ್ತೊಂದು ದೈತ್ಯ ರೂಪ. ಯಾವ ಸಂದರ್ಭದಲ್ಲಿ ಬೇಕಾದರೂ ಪಂದ್ಯಾಟದ ಗತಿಯನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿರುವ ಆಟಗಾರರಿವರು. ಅವರೊಂದಿಗೆ ಬೆಸ್ಟ್ ಫೀಲ್ಡರ್ ನಾಸೀರ್ ನಾಚಿ ಹಾಗೂ ಬೆಸ್ಟ್ ವಿಕೆಟ್‌ ಕೀಪರ್ ಖ್ಯಾತಿಯ ಜುನೈದ್ ಬಂಟ್ವಾಳ, ಈಸ್ಟರ್ನ್ ಬ್ಲೂವ್ಸ್ ಮಂಗಳೂರು ತಂಡವನ್ನು ಮುನ್ನಡೆಸಿ ಹಲವಾರು ಪ್ರಶಸ್ತಿಗಳನ್ನು ಚಾಚಿಕೊಂಡ ಮುನ್ನ ಕಮ್ಮರಡಿಯಂತ ಆಟಗಾರರ ಶಕ್ತಿಯೇ ಕೋಸ್ಟಲ್ ತಂಡದ ಯಶಸ್ವಿಯ ಗುಟ್ಟು.

ಇನ್ನು ಬೌಲಿಂಗ್ ವಿಭಾಗಕ್ಕೆ ಬಂದರೆ ಅನೀಷ್, ಲತೀಫ್ ಕುಕ್ಕಾಜೆ, ಸಮೀರ್ ಮಾರಿಪಲ್ಲ, ಶಂಶೀರ್ ಮಾರಿಪಲ್ಲ ಹಾಗೂ ಪಾರ್ಟ್ ಟೈಮ್ ಬೌಲರಾಗಿ ಸಲಾಂ ಸಮ್ಮಿ ನಿಭಾಯಿಸುವ ಜವಾಬ್ದಾರಿ ಇದೆ. ಆದರೆ‌ ಅನೀಷ್, ಲತೀಫ್ ಸಮೀರ್ ಮಾರಿಪಲ್ಲ‌ ಕಳೆದ ಸರಣಿಯಲ್ಲಿ ಯಶಸ್ವಿ ಪ್ರದರ್ಶನ ನೀಡಿರುವ ಸಲುವಾಗಿ ಮುಂದಿನ‌ ಪಂದ್ಯದಲ್ಲಿ ಅವರ ಮೇಲೆ ಜವಾಬ್ದಾರಿ ಹೆಚ್ಚಿದೆ.

ಇನ್ನು ತಂಡದ ವೀಕ್ ಏನಪ್ಪ ಎಂದರೆ ಬಹುಮುಖ್ಯ ಆಟಗಾರರಾದ ಇಮ್ತಿಯಾಝ್ ಹಜಾಜ್ ಗಾಯಳುವಾದ ಕಾರಣ ಅದರ ಸದುಪಯೋಗವನ್ನು ಎದುರಾಳಿ ತಂಡ ಪಡೆದುಕೊಳ್ಳಬಹುದು ಎಂದು ಹೇಳಲಾಗಿದೆ. ಆದರೆ ಅಷ್ಟು ಸುಲಭದಲ್ಲಿ ಬಿಟ್ಟು ಕೊಡಲು ಕೋಸ್ಟಲ್ ತಂಡ ತಯಾರಿಲ್ಲ.‌ ಯಾಕೆಂದರೆ ತಂಡದಲ್ಲಿ ಹಲವಾರು ಘಟಾನುಘಟಿ, ಅನುಭವಿ ಆಟಗಾರರು ಇರೋದರಿಂದ ಇಲ್ಲಿ ತಂಡವು ಇನ್ನಷ್ಟು ಬಲಿಷ್ಠವಾಗಿದೆ.
ಯಾವುದಕ್ಕೂ ಇನ್ನೊಂದು ದಿನ ಕಾಯೋಣ.

-ಸಲಾಂ ಸಮ್ಮಿ

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!