ಪುತ್ತೂರು: ಮುಹಿಯ್ಯದ್ದೀನ್ ಜಮಾ ಮಸೀದಿ ಬೀಟಿಗೆ ಇದರ ವಠಾರದಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆ ಬೀಟಿಗೆ ಜಮಾ ಮಸೀದಿಯ ವಠಾರದಲ್ಲಿ ನಡೆಯಿತ್ತು.
ಧ್ವಜಾರೋಹಣ ಕಾರ್ಯಕ್ರಮವನ್ನು ಜಮಾಅತ್ ಕಮಿಟಿಯ ಅಧ್ಯಕ್ಷರಾದ ಸುಲೈಮಾನ್ ಬೀಟಿಗೆ ಧ್ವಜಾರೋಹಣ ಗೈದರು. ದೇಶದ ಸಂವಿಧಾನ ಸಂರಕ್ಷಣೆಗಾಗಿ ಪ್ರಜಾಪ್ರಭುತ್ವದ ಉಳಿವಿಗಾಗಿ
ಪ್ಯಾಶಿಸ್ಟ ವಿರುದ್ಧ ನಾವು ಎಲ್ಲ ಒಟ್ಟಾಗಿ ಹೋರಾಟ ಮಾಡಿ.
ಶಹೀದ್ ಟಿಪ್ಪು ಸುಲ್ತಾನ್ ರ.ಅ ರವರ ಹೋರಾಟ ನಮಗೆ ಮಾದರಿಯಾಗಿರುತ್ತದೆ ಎಂದು
ಕಾರ್ಯಕ್ರಮದಲ್ಲಿ ಜಮಾ ಮಸೀದಿಯ ಖತೀಬ್ ಉಸ್ತಾದರಾದ ದಾವೂದ್ ಇಸ್ಮಾಯಿಲ್ ಫೈಝಿ ದಿಕ್ಸೂಚಿ ಭಾಷಣ ಮಾಡಿ ದುವಾಶೀವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಜಮಾಅತ್ ಕಮಿಟಿಯ ಕಾರ್ಯದರ್ಶಿಯಗಳಾದ ಹಮೀದ್ ಕೆದಿಲ, ಕರೀಂ ಬೀಟಿಗೆ, ಜಮಾಅತ್ ಕಮಿಟಿಯ ಸದಸ್ಯರಾದ ಕರೀಂ ಬೀಟಿಗೆ, ಅಬೂಬಕ್ಕರ್ ಕೆದಿಲ, ಕುತುಬಿಯತ್ ಕಮಿಟಿಯ ಸದಸ್ಯರಾದ ಉಸ್ಮಾನ್ ಮುದ್ರಾಜೆ, ಕುತುಬಿಯತ್ ಕಮಿಟಿಯ ಮಾಜಿ ಜೊತೆ ಕಾರ್ಯದರ್ಶಿ ಶಾಫಿ ಬೀಟಿಗೆ, ನೂರುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳು, ಊರ ನಾಗರಿಕರು ಉಪಸ್ಥಿರಿದ್ದರು.
ಕುತುಬಿಯತ್ ಕಮಿಟಿಯ ಕಾರ್ಯದರ್ಶಿ ಸಿದ್ದೀಕ್ ಬೀಟಿಗೆ ಸ್ವಾಗತಿಸಿ ಪ್ರತಿಜ್ಞೆ ಬೋಧನೆಯ ಮಾಡಿದರು.