dtvkannada

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವಾಂತರದಿಂದಾಗಿ RSS ಸಂಘದ ಪ್ರಮುಖ ನಾಯಕ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರ ಮನೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಘಟನೆ ಗುರುವಾರ ರಾತ್ರಿ ವೇಳೆ ನಡೆದಿದೆ. ಗೋಡೆ ಬಿದ್ದ ವೇಳೆ ಸ್ಥಳದಲ್ಲಿದ್ದ ದ್ವಿಚಕ್ರ ವಾಹನವೊಂದು ಜಖಂ ಆಗಿದೆ.

ಎರಡು ಬಾರಿ ಕಂಪೌಂಡ್ ನಿರ್ಮಾಣ:
ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಕಲ್ಲಡ್ಕ ಪೇಟೆಯಲ್ಲಿ ಎಷ್ಡು ಮೀಟರ್ ರಸ್ತೆ ಅಗಲೀಕರಣಗೊಳ್ಳುತ್ತದೆ ಎಂಬುದರ ಸ್ಪಷ್ಟವಾದ ಲೆಕ್ಕ ನೀಡದೆ ಜನ ಗೊಂದಲದಲ್ಲಿದ್ದಾರೆ.

ಕಲ್ಲಡ್ಕ ಪೇಟೆಯಲ್ಲಿ ಪ್ಲೈ ಓವರ್ ನಿರ್ಮಾಣದ ಪ್ಲಾನ್ ತಯಾರಿಸಿದ ಬಳಿಕ ರಸ್ತೆಯ ಇಕ್ಕೆಲಗಳು ಬಾಕಿ ಉಳಿದ ಕಡೆಗಳಿಗಿಂತ ಕಡಿಮೆ ಜಾಗ ಎಕ್ವೇರ್ ಮಾಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ಲೈ ಓವರ್ ನ ಎರಡು ಬದಿಗಳಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಗೊಳ್ಳುತ್ತದೆ ಈಗಾಗಿ ರಸ್ತೆ ಅಗಲೀಕರಣ ದ ಸರಿಯಾದ ಸರ್ವೆ ಕಾರ್ಯ ಮುಗಿದಿಲ್ಲ ಎಂಬುದು ಸ್ಥಳೀಯರ ಮಾತು. ಹಾಗಾಗಿ ಡಾ. ಪ್ರಭಾಕರ್ ಭಟ್ ಅವರ ಮನೆಯ ಕಾಂಪೌಂಡ್ ಎರಡು ಬಾರಿ ನಿರ್ಮಾಣ ಮಾಡಲಾಗಿತ್ತು.

ಒಂದು ಬಾರಿ ರಸ್ತೆ ಅಗಲೀಕರಣ ಕ್ಕಾಗಿ ಕೆಂಪು ಕಲ್ಲು ಬಳಸಿ ಕಟ್ಟಲಾಗಿತ್ತು. ಅ ಬಳಿಕ ಮತ್ತೆ ಕಾಂಕ್ರೀಟ್ ಸಿಮೆಂಟ್ ಮೂಲಕ ತಡೆಗೋಡೆ ರೀತಿಯಲ್ಲಿ ಕಾಂಪೌಂಡ್ ಗೋಡೆ ನಿರ್ಮಾಸಿಲಾಗಿತ್ತಾದರೂ ಯಾವುದೇ ಪ್ರಯೋಜನ ಕ್ಕೆ ಬಾರದೆ ನೆಲಸಮವಾಗಿದೆ.

By dtv

Leave a Reply

Your email address will not be published. Required fields are marked *

error: Content is protected !!