ಉಪ್ಪಿನಂಗಡಿ:- ಆಲ್ಟೋ ಕಾರು ಮತ್ತು ರಿಕ್ಷಾ ನಡುವೆ ಮುಖಾ-ಮುಖಿ ಡಿಕ್ಕಿ ಸಂಭವಿಸಿ, ಇಬ್ಬರು ಗಾಯಗೊಂಡ ಘಟನೆ ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ.
![](http://dtvkannada.in/wp-content/uploads/2022/01/IMG-20220128-WA0040.jpg)
ಉಪ್ಪಿನಂಗಡಿಯಿಂದ ಪುತ್ತೂರು ಕಡೆ ಹೋಗುತ್ತಿದ್ದ ರಿಕ್ಷಾ ಮತ್ತು ಅದರ ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಆಲ್ಟೋ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ರಿಕ್ಷಾ ಪಕ್ಕದ ಕಂದಕಕ್ಕಿಳಿದಿದೆ.
![](http://dtvkannada.in/wp-content/uploads/2022/01/IMG-20220128-WA0044.jpg)
![](http://dtvkannada.in/wp-content/uploads/2022/01/IMG-20220128-WA0042.jpg)
![](http://dtvkannada.in/wp-content/uploads/2022/01/IMG-20220128-WA0043.jpg)
ಅಪಘಾತದಲ್ಲಿ ಇಬ್ಬರಿಗೆ ಗಾಯಗಳಾಗಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
![](http://dtvkannada.in/wp-content/uploads/2022/01/IMG-20220128-WA0037.jpg)