ಮ್ಯಾಂಚೆಸ್ಟರ್ ಯುನೈಟೆಡ್‌ನ ಸ್ಟಾರ್ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ತಮ್ಮ ಮಡದಿ ಜಾರ್ಜಿನಾ ರೊಡ್ರಿಗಸ್ ಹುಟ್ಟುಹಬ್ಬಕ್ಕೆ ಮರೆಯಲಾಗದ ಉಡುಗೊರೆ ನೀಡಿದ್ದಾರೆ. ಅದೆನೆಂದರೆ, ವಿಶ್ವದ ಅತಿ ಎತ್ತರದ ಕಟ್ಟಡವಾದ ದುಬೈನಲ್ಲಿರುವ ಬುರ್ಜ್ ಖಲೀಫಾದ ಮೇಲೆ ತಮ್ಮ ಮಡದಿಯ ಭಾವಚಿತ್ರವಿರುವ ಲೇಸರ್ ಶೋ ಏರ್ಪಡಿಸುವ ಮೂಲಕ ಮಡದಿ ಜಾರ್ಜಿನಾ ರೊಡ್ರಿಗಸ್ಗೆ ಸವಿ ನೆನಪಿನ ಕಾಣಿಕೆ ನೀಡಿದ್ದಾರೆ.
ಐದು ಬ್ಯಾಲನ್ ಡಿ ಓರ್ ಪ್ರಶಸ್ತಿಗಳ ವಿಜೇತ ರೊನಾಲ್ಡೊ, ದುಬೈನ ಹೃದಯಭಾಗದಲ್ಲಿರುವ ಐಕಾನಿಕ್ ಟವರ್ ಮೇಲೆ ತನ್ನ ಮಡದಿಗೆ ಜನ್ಮ ದಿನದ ಶುಭಾಷಯ ಕೋರಲು ಬರೋಬ್ಬರಿ 50,000 ಪೌಂಡ್‌ಗಳನ್ನು ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ.
370 ಮಿಲಿಯನ್ ಪೌಂಡ್ ಆಸ್ತಿಯ ಒಡೆಯನಾಗಿರುವ 36 ವರ್ಷದ ರೊನಾಲ್ಡೊ, ಗುರುವಾರ ರಾತ್ರಿ ಗಗನಚುಂಬಿ ಕಟ್ಟಡದ ಮೇಲೆ ತನ್ನ 28 ವರ್ಷದ ಮಾಡೆಲ್ ಗೆಳತಿಯ ಚಿತ್ರಗಳು ಮತ್ತು ವೀಡಿಯೊಗಳನ್ನು ಐಕಾನಿಕ್ ಟವರ್‌ನ ಮೇಲೆ 30 ಸೆಕೆಂಡುಗಳ ಕಾಲ ಪೋಸ್ಟ್ ಮಾಡಿದ್ದಾರೆ. ಸದ್ಯ ಇಂಗ್ಲಿಷ್ ಪ್ರೀಮಿಯರ್ ಲೀಗ್‌ನಲ್ಲಿ ಭಾಗವಹಿಸಿರುವ ರೊನಾಲ್ಡೊ, ಚಳಿಗಾಲದ ವಿರಾಮದ ಸಮಯವನ್ನು ಕುಟುಂಬದೊಂದಿಗೆ ದುಬೈನಲ್ಲಿ ಕಳೆಯುತ್ತಿದ್ದಾರೆ.