ಜೋಧಪುರ; ರೂಪದರ್ಶಿಯೊಬ್ಬಳು ತಾನು ತಂಗಿದ್ದ ಹೊಟೇಲ್‌ನ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ.
ಜೋಧಪುರ ನಗರ ನಿವಾಸಿಯಾಗಿರುವ ಫ್ಯಾಷನ್ ಮಾಡೆಲ್ 19 ವರ್ಷದ ಗುನ್‌ಗುನ್ ಉಪಾಧ್ಯಾಯ ಹೊಟೇಲ್ ಲಾರ್ಡ್ಸ್ ಇನ್‌ನಲ್ಲಿ ತಂಗಿದ್ದು, ಭಾನುವಾರ ರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ತಿಳಿದು ಬಂದಿದೆ.
ಇದಕ್ಕೂ ಮೊದಲು ಗುನ್‌ಗುನ್ ತನ್ನ ತಂದೆಗೆ ವೀಡಿಯೋ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರ ತಿಳಿಸಿದ್ದು, ತನ್ನ ಮುಖವನ್ನು ಕೊನೆಯ ಬಾರಿಗೆ ನೋಡಿ ಎಂದು ಹೇಳಿದ್ದಾಳೆ ಎನ್ನಲಾಗಿದೆ.
ಈ ಮಾತು ಕೇಳಿ ಗಾಬರಿಯಾದ ತಂದೆ, ಕೂಡಲೇ ಜೋಧಪುರ ಪೊಲಿಸರಿಗೆ ಮಾಹಿತಿ ನೀಡಿದ್ದು
ಪೊಲೀಸರು ಹೊಟೇಲ್ ತಲುಪುವಷ್ಟರಲ್ಲಿ ಆಕೆ 6ನೇ ಮಹಡಿಯಿಂದ ಜಿಗಿದಿದ್ದಳು.
ಗಂಭೀರ ಗಾಯಗೊಂಡ ಗುನ್‌ಗುನ್ ಉಪಾಧ್ಯಾಯಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದ ಗುನ್’ಗುನ್, ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.