';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಉಡುಪಿ: ಕಾಲೇಜಿಗೆ ಹಿಜಾಬ್ ಹಾಕಿಕೊಂಡು ಬರುವ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಒದ್ದು ಮನೆಗೆ ಕಳಿಸಿ ಎಂದು ಶ್ರೀರಾಮ ಸೇನೆ ಸ್ಥಾಪಕಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಕಾಲೇಜ್ವೊಂದರಲ್ಲಿ ಬಾಲಕಿಯರು ಹಿಜಾಬ್ ಹಾಕಿಕೊಂಡು ಬಂದಿರುವುದು ಚರ್ಚೆ ಆಗುತ್ತಿದೆ.ಅದು ಒಂದು ಚರ್ಚೆಯ ವಿಷಯವೇ ಅಲ್ಲ.
ಶಾಲೆಯಲ್ಲಿ ಎಲ್ಲರೂ ಸಮವಸ್ತ್ರ ಹಾಕಿಕೊಳ್ಳಬೇಕು. ಅದರಲ್ಲಿ ಯಾವುದೇ ಜಾತಿ ಇರಲ್ಲ. ಈ ರೀತಿಯ ಭಂಡತನ ಭಯೋತ್ಪಾದನೆಗೆ ತೆಗೆದುಕೊಂಡು ಹೋಗುತ್ತದೆ ಎಂದು ಮುತಾಲಿಕ್ ಕಿಡಿಕಾರಿದರು.
ಇದು ಶಾಲೆಯೋ ಅಥವಾ ಧಾರ್ಮಿಕ ಕೇಂದ್ರವೋ. ನಿಮ್ಮ ಸ್ವತಂತ್ರ ಕೇವಲ ನಿಮ್ಮ ಮನೆಯಲ್ಲಿ ಇರಲಿ. ಹಿಜಾಬ್ ಹಾಕಿಕೊಂಡು ಬರುವ ವಿದ್ಯಾರ್ಥಿಗಳಿಗೆ ಟಿಸಿ ಕೊಟ್ಟು ಒದ್ದು ಮನೆಗೆ ಕಳಿಸಬೇಕು. ಪ್ರತ್ಯೇಕತೆ ಬೇಕು ಅಂದ್ರೆ ಪಾಕಿಸ್ತಾನಕ್ಕೆ ಹೋಗಿ ಎಂದು ನುಡಿದರು.
ಈ ಬಗ್ಗೆ ಸರ್ಕಾರಕ್ಕೂ ಎಚ್ಚರ ನೀಡಿದ ಮುತಾಲಿಕ್ ಸರ್ಕಾರವು ಇದಕ್ಕೆ ಅವಕಾಶ ನೀಡಬಾರದು ಎಂದರು.