dtvkannada

'; } else { echo "Sorry! You are Blocked from seeing the Ads"; } ?>

ಮಡಿಕೇರಿ, ಫೆ:05: ಮುಸ್ಲಿಮ್ ಮಹಿಳೆಯರ ಸಾಂವಿದಾನಿಕ ಮತ್ತು ಧಾರ್ಮಿಕ ಹಕ್ಕಾಗಿರುವ ಹಿಜಾಬ್ ನ್ನು ಧರಿಸಿ ಶಾಲೆಗಲ್ಲ, ಮದ್ರಸಕ್ಕೆ ಹೋಗಿ ಎಂಬ ಸಂಸದ ಪ್ರತಾಪ ಸಿಂಹ ಸಂವಿದಾನ ವಿರೋದಿ ಹೇಳಿಕೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕೊಡಗು ಜಿಲ್ಲಾದ್ಯಕ್ಷರಾದ ಮುಸ್ತಫಾ ಮಡಿಕೇರಿ ಖಂಡಿಸಿದ್ದಾರೆ ಮತ್ತು ನಿರಂತರವಾಗಿ ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಕೋಮು ಸೌಹಾರ್ದತೆ ಕೆಡಿಸುತ್ತಿರುವ ಸಂಸದ ಪ್ರತಾಪ್ ಸಿಂಹನ ಸಂಸತ್ ಸದಸ್ಯತನದಿಂದ ಉಚ್ಚಾಟಿಸಬೇಕೆಂದು ಆಗ್ರಹಿಸಿದ್ದಾರೆ.

ಭಾರತ ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಾ ವಿಶ್ವಕ್ಕೆ ಸಮಾನತೆಯನ್ನು ಎತ್ತಿ ತೋರಿಸುತ್ತಾ ಬಂದಿದೆ. ದೇಶವೂ ಸಾಂವಿದಾನಿಕ,ಪ್ರಜಾಸತಾತ್ಮಕ ದೇಶವಾಗಿದ್ದು. ಪ್ರತಿಯೊಬ್ಬ ಧರ್ಮಿಯನಿಗೂ ಅವನ ಆಚಾರ ವಿಚಾರದಂತೆ ನಡೆದುಕೊಳ್ಳಲು ಸಂವಿದಾನ ಅವಕಾಶ ನೀಡಿದೆ.ಹೀಗಿರುವಾಗ ಜನಪ್ರತಿನಿಧಿಯಾದವರು ಸಂವಿಧಾನ ವಿರೋಧಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವುದು ಖಂಡನಾರ್ಹವಾಗಿದೆ ಮತ್ತು ಸಂಸದ ಸ್ತಾನಕ್ಕೆ ಬಗೆದ ಅಪಚಾರ ವಾಗಿದೆ‌.

'; } else { echo "Sorry! You are Blocked from seeing the Ads"; } ?>

ಮೈಸೂರು-ಕೊಡಗು ಕ್ಷೇತ್ರದ ಸಂಸದನಾಗಿ ಅಬಿವೃದ್ದಿ ಕೆಲಸದಲ್ಲಿ ಶೂನ್ಯವಾಗಿ ನಿಂತಿರುವ ಪ್ರತಾಪ ಸಿಂಹ ಚುನಾವಣೆಯ ಹೊಸ್ತಿಲಲ್ಲಿ ಸಂಧರ್ಭದಲ್ಲಿ ತನ್ನ ವೋಟ್ ಬ್ಯಾಂಕಿ ಗಟ್ಟಿಗೊಳಿಸುವ ಸಲುವಾಗಿ ಹಿಂದೂ,ಮುಸ್ಲಿಮ್ ಕೋಮು ಧ್ರುವೀಕರಣ ಮಾಡುವುದರ ಮೂಲಕ ಒಂದು ವರ್ಗವನ್ನು ಎತ್ತಿಕಟ್ಟಿ ಈ ನೆಲದ ಸೌಹರ್ದತೆಯನ್ನು ಕದಡುವ ಕೆಲಸ ಮಾಡುತ್ತಿರುವ ಸಂಸದ ಪ್ರತಾಪ್ ಸಿಂಹನ ಸಂಸತ್ ಸ್ತಾನದಿಂದ ಉಚ್ಚಾಟಿಸಬೇಕೆಂದು ಎಸ್‌ಡಿಪಿಐ ಕೊಡಗು ಜಿಲ್ಲಾಧ್ಯಕ್ಷರಾದ ಮುಸ್ತಫಾ ಮಡಿಕೇರಿ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ

'; } else { echo "Sorry! You are Blocked from seeing the Ads"; } ?>

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!