dtvkannada

ಉಳ್ಳಾಲ, 06 ಫೆ.2022: ಲೈಫ್ ಕೇರ್ ಹೆಲ್ತ್ ಸೆಂಟರ್ ಇದರ ನೂತನ ಶಾಖೆಯು ಉಳ್ಳಾಲದ ಮಾಸ್ತಿಕಟ್ಟೆಯ ಅಲ್ ಐನ್ ಟವರ್ ನಲ್ಲಿ ಇಂದು ಶುಭಾರಂಭಗೊಂಡಿತು.

ಉದ್ಘಾಟನೆಯ ಪ್ರಯುಕ್ತ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ಶ್ರೀನಿವಾಸ ಆಸ್ಪತ್ರೆ ರಕ್ತನಿಧಿ ಮುಕ್ಕ, ಸುರತ್ಕಲ್ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

ರಕ್ತದಾನ ಶಿಬಿರದಲ್ಲಿ ಒಟ್ಟು ಮೂವತ್ತು ಮಂದಿ ರಕ್ತದಾನ ಮಾಡುವ ಮೂಲಕ ಜೀವದಾನಿಯಾದರು.

ಕಾರ್ಯಕ್ರಮದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ತುರ್ತು ಅವಶ್ಯಕತೆಗಾಗಿ ಧಾವಿಸಿ ರಕ್ತದಾನ ಮಾಡಿ ಮಾನವೀಯತೆ ಮೆರೆದ ಸರ್ವ ಸಹೃದಯೀ ದಾನಿಗಳಿಗೂ, ಹೆಲ್ತ್ ಸೆಂಟರ್ ಹಾಗೂ ರಕ್ತನಿಧಿಯ ಸಿಬ್ಬಂದಿ ವರ್ಗಕ್ಕೂ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಕಾರ್ಯನಿರ್ವಾಹಕರು ಕೃತಜ್ಞತೆ ಸಲ್ಲಿಸಿದರು.

ಸಂಸ್ಥೆಯ ಮುಖ್ಯಸ್ಥ ಆಶಿಕ್ ಕುಕ್ಕಾಜೆ ಸ್ವಾಗತಿಸಿ, ಮುಕ್ತಾರ್ ರವರು ವಂದಿಸಿದರು.

By dtv

Leave a Reply

Your email address will not be published. Required fields are marked *

error: Content is protected !!