ಮಲ್ಲೂರು: ಕರ್ನಾಟಕದಲ್ಲಿ ತಲೆ ಎತ್ತಿರುವ ಹಿಜಾಬ್ ವಿವಾದದ ಹಿಂದೆ ಇಲ್ಲಿನ ಕೆಲವೊಂದು ಹಿತಾಶಕ್ತಿಗಳ ಹಿಡನ್ ಅಜಂಡಾ ಒಳಗೊಂಡಿದೆ ಎಂದು ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಇಂದು ಮಲ್ಲೂರು ಬದ್ರಿಯಾ ನಗರದಲ್ಲಿ ನಡೆದ ಮದನಿಯಂ ಮಜ್ಲೀಸ್ ನಲ್ಲಿ ಹೇಳಿದರು.
ಶಾಂತಿಯ ನಾಡನ್ನು ಸಂಘರ್ಷಕ್ಕಿಳಿಸಲು ಇಲ್ಲಿನ ಕೆಲವೊಂದು ಶಕ್ತಿಗಳು ಪ್ರಯತ್ನಿಸುತ್ತಿದ್ದು ಅದರ ಬಾಗವಾಗಿದೆ ಹಿಜಾಬ್ ವಿವಾದ
ಇಷ್ಟು ವರ್ಷಗಳ ಕಾಲ ಕಾಲೇಜುಗಳಿಗೆ ಅನ್ವಯವಾಗುತ್ತಿದ್ದ ಹಿಜಾಬ್ ಇದೀಗ ಇದ್ದಕಿದ್ದಂತೆ ಅದು ವಿವಾದವಾಗುವುದಾದರು ಹೇಗೆ ಇದರ ಹಿಂದೆ ಕಾಣದ ಕೈಗಳ ಹಿಡನ್ ಅಜಂಡಾ ಒಳಗೊಂಡಿದೆ ಅಂತಹ ಶಕ್ತಿಗಳನ್ನು ಸೋಲಿಸಬೇಕಿದೆ ಎಂದು ಅವರು ಹೇಳಿದರು.
ಮತ್ತು ಆಧ್ಯಾತ್ಮಿಕ ತುಂಬಿದ ಮದನಿಯಂ ಮಜ್ಲೀಸ್ ನಲ್ಲಿ ಹೋರಾಟಕ್ಕಿಳಿದಿರುವ ಸಮುದಾಯದ ಯಶಸ್ವಿಗೆ ಪ್ರತ್ಯೇಕ ಪ್ರಾರ್ಥನೆ ನಡೆಸಿದರು.ಪ್ರಸ್ತುತ ಘಟನೆಯನ್ನು ತೀವ್ರವಾಗಿ ಖಂಡಿಸಿ ಪ್ರಬಾಷಣಗೈದರು.
ದಿನಂಪ್ರತಿ ಆನ್-ಲೈನ್ ಮುಕಾಂತರ ನಡೆಯುವ ಮದನಿಯಂ ಆಧ್ಯಾತ್ಮಿಕ ಮಜ್ಲೀಸ್ ಇಂದು ತೆರೆದ ವೇದಿಕೆಯಲ್ಲಿ ಸಹಸ್ರಾರು ಮಂದಿ ಜನರ ಉಪಸ್ಥಿತಿಯಲ್ಲಿ ಮಲ್ಲೂರು ಬದ್ರಿಯಾ ನಗರದಲ್ಲಿ ನಡೆಯಿತು.