dtvkannada

ನವದೆಹಲಿ: ‘ದಿ ಗ್ರೇಟ್‌ ಖಲಿ’ ಖ್ಯಾತಿಯ ವೃತ್ತಿಪರ ‘ಡಬ್ಲ್ಯುಡಬ್ಲ್ಯುಇ’ ಕುಸ್ತಿಪಟು ದಲೀಪ್ ಸಿಂಗ್ ರಾಣಾ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಪಂಜಾಬ್ ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನು ಕೆಲವು ದಿನಗಳು ಬಾಕಿ ಇರುವಾಗಲೇ ಖಲಿ ಅವರನ್ನು ಬಿಜೆಪಿಯು ಪಕ್ಷಕ್ಕೆ ಸೇರಿಸಿಕೊಂಡಿದೆ.
ಫೆಬ್ರವರಿ 20 ರಂದು ಪಂಜಾಬ್‌ನಲ್ಲಿ ಒಂದೇ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

‘ಬಿಜೆಪಿಗೆ ಸೇರ್ಪಡೆಗೊಂಡಿದ್ದಕ್ಕೆ ನನಗೆ ಸಂತೋಷವಾಗಿದೆ. ಮೋದಿ ಅವರು ರಾಷ್ಟ್ರಕ್ಕಾಗಿ ಮಾಡಿದ ಕೆಲಸವು ಅವರನ್ನು ಪ್ರಧಾನಿಯನ್ನಾಗಿ ಮಾಡಿದೆ ಎಂದು ನಾನು ಭಾವಿಸಿದ್ದೇನೆ. ಹಾಗಾಗಿ, ರಾಷ್ಟ್ರದ ಅಭಿವೃದ್ಧಿಗಾಗಿ ಅವರ ಆಡಳಿತದಲ್ಲಿ ನಾನು ಕೂಡ ಭಾಗವಾಗಬಾರದೇಕೆ ಎಂದು ಚಿಂತಿಸಿದ್ದೇನೆ’ ಎಂದು ಖಲಿ ನವದೆಹಲಿಯಲ್ಲಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಹೇಳಿದರು.

ಖಲಿ 2000 ರಲ್ಲಿ ತಮ್ಮ ವೃತ್ತಿಪರ ಕುಸ್ತಿಗೆ ಪಾದಾರ್ಪಣೆ ಮಾಡಿದರು. ಡಬ್ಲ್ಯುಡಬ್ಲ್ಯುಇಗೆ ಸೇರುವ ಮುನ್ನ ಅವರು ಪಂಜಾಬ್‌ನಲ್ಲಿ ಪೋಲಿಸ್‌ ಅಧಿಕಾರಿಯಾಗಿದ್ದರು.

ಡಬ್ಲ್ಯುಡಬ್ಲ್ಯುಇನಲ್ಲಿ ಅವರು ಚಾಂಪಿಯನ್‌ ಕೂಡ ಆಗಿದ್ದರು.
ಅವರು ನಾಲ್ಕು ಹಾಲಿವುಡ್ ಚಿತ್ರಗಳು ಮತ್ತು ಎರಡು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!