ಉಪ್ಪಿನಂಗಡಿ: SYS ಮತ್ತು SSF ಇಳಂತಿಲ ಮುರ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುವ 13ನೇ ವರ್ಷದ ಅಜ್ಮೀರ್ ಆಂಡ್ ನೇರ್ಚೆ ಇಂದು ಸಂಜೆ 5 ಗಂಟೆಗೆ ಮುರ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.

ಸಂಜೆ 5 ಕ್ಕೆ ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರ್ ರವರ ನೇತೃತ್ವದಲ್ಲಿ ಖತಮುಲ್ ಕುರ್-ಆನ್ ನಡೆಯಲಿದೆ.
ಮಗ್ರಿಬ್ ಬಳಿಕ ಖ್ಯಾತ ವಿದ್ವಾಂಸರು ತಾಳ್ಮೆಯ ಪ್ರತೀಕ ವಳವೂರ್ ಉಸ್ತಾದರಿಗೆ ಖ್ವಾಜ ಮುಈನುದ್ದೀನ್ ಪ್ರಶಸ್ತಿ ಪ್ರಧಾನಗೈಯಲಿದೆ.
ತದ ನಂತರ ನಡೆಯುವ ಪ್ರಭಾಷಣ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ವಾಗ್ಮಿ ಬಹು ಪೆರೋಡ್ ಉಸ್ತಾದ್ ಮುಖ್ಯ ಪ್ರಬಾಷಣ ಗೈಯಲಿದ್ದಾರೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಹಲವಾರು ಉಲಮಾ, ಉಮಾರಾ ನಾಯಕರು ಬಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಸಹಸ್ರಾರು ಮಂದಿಗಳು ಬಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘಟಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.