dtvkannada

ಕೊಚ್ಚಿ: ಖ್ಯಾತ ಮಲಯಾಳಂ ಹಾಸ್ಯ ನಟ ಪ್ರದೀಪ್ ಕೊಟ್ಟಾಯಂ ಹೃದಯಾಘಾತದಿಂದ ಗುರುವಾರ ಮುಂಜಾನೆ ಆಸ್ಪತ್ರೆಯಲ್ಲಿ ನಿಧನರಾದರು.

ಹಲವಾರು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ಪ್ರದೀಪ್ ರವರು ಹಾಸ್ಯ ಪಾತ್ರಗಳಲ್ಲಿ ಜನ ಮನಗೆದ್ದಿದ್ದರು.

ಇದೀಗ ಅವರ 61 ವರ್ಷದಲ್ಲಿ ಅವರು ಇಹಲೋಕ ತ್ಯಜಿಸಿದರು
ಮಾಯಾ ಅವರನ್ನು ವಿವಾಹವಾಗಿದ್ದ ಪ್ರದೀಪ್ ರವರಿಗೆ ಎರಡು ಮಕ್ಕಳಿದ್ದಾರೆ.
ತೀವ್ರ ಅಸ್ವಸ್ಥ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.

ಕೊಟ್ಟಾಯಂ ಪ್ರದೀಪ್ ನಿಧನಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಂತಾಪ ಸೂಚಿಸಿದ್ದಾರೆ. ಸಣ್ಣಪುಟ್ಟ ಪಾತ್ರಗಳನ್ನೂ ತಮ್ಮ ಸ್ವಾಭಾವಿಕ ಶೈಲಿಯಿಂದ ಪ್ರೇಕ್ಷಕರ ಮನದಲ್ಲಿ ತುಂಬಿದ ವಿಶಿಷ್ಟ ನಟ ಎಂದು ಸಿಎಂ ಸ್ಮರಿಸಿದರು. ಕುಟುಂಬಕ್ಕೆ ಮತ್ತು ಅವರ ಆತ್ಮೀಯರಿಗೆ ಸಿಎಂ ಸಾಂತ್ವನ ಹೇಳಿದರು.
ವಿನೀತ್ ಶ್ರೀನಿವಾಸನ್ ರವರ ಪೊಲೀಸ್ ಪೇದೆಯ ಪಾತ್ರ ತಟ್ಟತಿನ್ ಮರಯಂನಲ್ಲಿ ಪ್ರೇಕ್ಷಕರ ಗಮನ ಸೆಳೆದಿತ್ತು. ಆಮೆನ್, ಸೆವೆಂತ್ ಡೇ, ಪೆರುಚಾಜಿ, ಮತ್ತು ಆಲ್ವೇಸ್, ಲೈಫ್ ಆಫ್ ಜೋಸುಟ್ಟಿಯಲ್ಲಿ ಇವರದ್ದು ಗಮನಾರ್ಹ ಪಾತ್ರಗಳು. ಆಡು ಒಂದು ಟೆರರಿಸ್ಟ್, ಐದು ಸುಂದರಿಯರು, ಜಮ್ನಾಪರಿ, ರಾಮರಾಜ್ಯದ ರಾಜ, ಅಮರ್ ಅಕ್ಬರ್ ಆಂಥೋನಿ, ಆದಿ ಕಪ್ಯಾರೆ ಕೂಟಮಣಿ ಮತ್ತು ಕಟ್ಟಪ್ಪನಯಿಲೆ ಹೃತಿಕ್ ರೋಷನ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

By dtv

Leave a Reply

Your email address will not be published. Required fields are marked *

error: Content is protected !!