dtvkannada

ಮದುವೆಗಳಲ್ಲಿ ಕೆಲವೊಂದು ದೃಶ್ಯಗಳು ನೋಡುಗರನ್ನು ಭಾವುಕರನ್ನಾಗಿ ಮಾಡುತ್ತದೆ. ಹುಟ್ಟಿದ ಮನೆಯನ್ನು, ತನ್ನವರನ್ನು ತೊರೆದು ಹೊಸದೊಂದು ಕುಟುಂಬಕ್ಕೆ ಸೇರಿಕೊಳ್ಳುವ ಗಳಿಗೆ ಎಂತಹ ಹೆಣ್ಣನ್ನು ಒಂದು ಕ್ಷಣ ದಿಗಿಲುಗೊಳಿಸುತ್ತವೆ. ಜತೆಯಲ್ಲಿ ಬೆಳೆದ ಅಣ್ಣ ತಮ್ಮಂದಿರನ್ನು, ಅಕ್ಕ ತಂಗಿಯರಿಂದ ದೂರವಾಗಿ ಬದುಕುವುದು ಆಕೆಯಿಂದ ಮಾತ್ರ ಸಾಧ್ಯ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಧುವನ್ನು ಸಹೋದರರು ಮಂಟಪಕ್ಕೆ ಅಂಗೈಮೇಲೆ ನಡೆಸಿಕೊಂಡು ಕರೆದುಕೊಂಡು ಬರುವ ವಿಡಿಯೋ ವೈರಲ್ ಆಗಿದೆ.

ವಧುವಿನ ಸಹೋದರರು ವಧು ಬರುವ ಹಾದಿಯಲ್ಲಿ ತಮ್ಮ ಅಂಗೈಗಳನ್ನು ಇಟ್ಟು ಆಕೆಯನ್ನು ಕೈಗಳ ಮೇಲೆ ನಡೆದುಕೊಂಡು ಹೋಗುವಂತೆ ಹೇಳುತ್ತಾರೆ. ಇದರಿಂದ ಭಾವುಕಗೊಂಡ ವಧು ತನ್ನ ಪ್ರೀತಿಯ ಸಹೋದರರ ಅಂಗೈ ಮೇಲೆ ನಡೆದುಕೊಂಡು ಬರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಇದರ ವಿಡಿಯೋವನ್ನು ‘witty_wedding’ ಎನ್ನುವ ಇನ್ಸ್ಟಾಗ್ರಾಮ್ ಖಾತೆ ಹಂಚಿಕೊಂಡಿದೆ. ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಅದ್ದೂರಿಯಾಗಿ ತಯಾರಾದ ವಧು, ಸಹೋದರರ ಅಂಗೈ ಮೇಲೆ ಬರುವುದನ್ನು ಕಂಡು ನೆಟ್ಟಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಪ್ರೀತಿಸುವ ಸಹೋದರರನ್ನು ಪಡೆದ ಆಕೆ ಅದೃಷ್ಟವಂತೆ ಎಂದಿದ್ದಾರೆ.

ವೀಡಿಯೋ ನೋಡಿ

By dtv

Leave a Reply

Your email address will not be published. Required fields are marked *

error: Content is protected !!