ದಮ್ಮಾಮ್: KIC (ಕರ್ನಾಟಕ ಇಸ್ಲಾಮಿಕ್ ಸೆಂಟರ್, ಕುಂಬ್ರ) ಇದರ ದಮ್ಮಾಮ್-ಅಲ್ ಖೋಬರ್ ಸಮಿತಿಯ ವಾರ್ಷಿಕ ಮಹಾ ಸಭೆಯು ದಮ್ಮಾಮ್ ನ ಬೇ ಲೀಫ್ ಹೋಟೆಲ್ ಸಭಾಂಗಣದಲ್ಲಿ ಬಹು.ಮನ್ಸೂರ್ ಹುದವಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು.
ಈ ಸಂಧರ್ಭದಲ್ಲಿ 2022 ರ ಸಾಲಿನ ನೂತನ ಸಮಿತಿ ರಚಿಸಲಾಯಿತು.
ಕಾರ್ಯಕ್ರಮದಲ್ಲಿ ರಝಾಕ್ ಮಂಡಕೋಲ್ ಅವರು ನೆರೆದವರನ್ನು ಸ್ವಾಗತಿಸಿದರು.
ಜ.ಅಮ್ಜಾದ್ ಖಾನ್ ಪೋಳ್ಯ ಅವರು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆಯನ್ನು ನೆರವೇರಿಸಿದರು.
ನೂತನ ಸಮಿತಿಯ ಅಧ್ಯಕ್ಷರಾಗಿ ಜ.ರಝಾಕ್ ಮಂಡೆಕೋಲು ಅವರು ಪುನರಾಯ್ಕೆಯಾದರು.
ಗೌರವಾಧ್ಯಕ್ಷರಾಗಿ ಅಮ್ಜಾದ್ ಖಾನ್ ಪೋಳ್ಯ, ಉಪಾಧ್ಯಕ್ಷರಾಗಿ ಬಶೀರ್ ಅಝ್ಹರಿ, ಪ್ರಧಾನ ಕಾರ್ಯದರ್ಶಿಯಾಗಿ ನೌಫಲ್ ಕೂರ್ನಡ್ಕ, ಜೊತೆ ಕಾರ್ಯದರ್ಶಿಯಾಗಿ ರಶೀದ್ ಸುಳ್ಯ, ಕೋಶಾಧಿಕಾರಿಯಾಗಿ ಇರ್ಷಾದ್ ಕುಂಡಡ್ಕ, ಲೆಕ್ಕ ಪರಿಶೋಧಕರಾಗಿ ಶಾಲಿಕ್ ಪುತ್ತೂರು, ಸಲಹೆಗಾರರಾಗಿ ಹಮೀದ್ ಕಬಕ, ಹೈದರ್ ಅಡ್ಡೂರು, ಶರೀಫ್ ಮೆನಾಲ, ನೌಶಾದ್ ಪೋಳ್ಯ ಅವರು ಆಯ್ಕೆಯಾದರು.
ಈ ಸಂಧರ್ಭದಲ್ಲಿ ವೀಕ್ಷಕರಾಗಿ ಕೆಐಸಿ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಲತೀಫ್ ಮರಕ್ಕಿಣಿ, ಪ್ರ.ಕಾರ್ಯದರ್ಶಿ ಅಶ್ರಫ್ ನೌಶಾದ್ ಪೋಳ್ಯ, ಪದಾಧಿಕಾರಿಗಳಾದ ಇಕ್ಬಾಲ್ ಪರ್ಲಡ್ಕ, ಇಕ್ಬಾಲ್ ಆತೂರು, ಅಶ್ರಫ್ ಮುಕ್ವೆ, ತಾಹಿರ್ ಸಾಲ್ಮರ, ಅನಸ್ ವಿಟ್ಲ ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಕೊನೆಯಲ್ಲಿ ಹಮೀದ್ ಕಬಕ ಅವರು ಧನ್ಯವಾದಗೈದರು.