';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪಾವಗಡ: ಪತಿಯ ಜತೆ ಜಗಳವಾಡಿದ ಪತ್ನಿ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಉಪ್ಪಾರ ಹಳ್ಳಿ ತಾಂಡದಲ್ಲಿ ನಡೆದಿದೆ.
ಪತಿ ವೆಂಕಟೇಶ್ ನಾಯ್ಕ್ ನೊಂದಿಗೆ ಶುಕ್ರವಾರ ರಾತ್ರಿ ಜಗಳವಾಡಿದ ಪತ್ನಿ ಬುಜ್ಜಿಬಾಯಿ (30) ಗ್ರಾಮದ ಹತ್ತಿರ ಇರುವ ಪುರಾತನ ಬಾವಿಗೆ ಮಕ್ಕಳಾದ ಖುಷಿ (9),ಹರ್ಷಿಣಿ (6) ಯೊಂದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಗ್ಗೆ ಮಕ್ಕಳ ಮೃತ ದೇಹ ಸಿಕ್ಕಿದ್ದು, ತಾಯಿಗಾಗಿ ಪಾವಗಡ ಅಗ್ನಿಶಾಮಕ ಸಿಬ್ಬಂದಿಗಳು ಶೋಧ ನಡೆಸಿದ್ದು, ಸಂಜೆ ವೇಳೆ ಬುಜ್ಜಿಬಾಯಿ ಮೃತದೇಹ ಪತ್ತೆಯಾಗಿದೆ.
ವಿಷಯ ತಿಳಿದ ತಿರುಮಣಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ವೆಂಕಟೇಶ್ ನಾಯ್ಕ್ ಅವರನ್ನು ವಶಕ್ಕೆ ಪಡೆದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.