ಬೆಳ್ತಂಗಡಿ: ಸಚಿವ ಈಶ್ವರಪ್ಪ ದೆಹಲಿ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ವಿವಾದ ಮಾತಿನ ಬೆನ್ನಲ್ಲೇ ಬೆಳ್ತಂಗಡಿ ಶಾಸಕ ಮತ್ತೆ ನಾಲಿಗೆ ಹರಿಯ ಬಿಟ್ಟಿದ್ದು ಬೆಳ್ತಂಗಡಿಯಲ್ಲಿ ನಡೆದ ಬಿಜೆಪಿ ಮಂಡಲದ ಪ್ರತಿಭಟನೆಯೊಂದರಲ್ಲಿ ಪ್ರಚೋದನಾಕಾರಿ ಬಾಷಣ ಮಾಡಿ ಮತ್ತೊಮ್ಮೆ ವಿವಾದಕ್ಕೀಡಾಗಿದ್ದಾರೆ.
ಈಶ್ವರಪ್ಪನವರು ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದಿದ್ದಕ್ಕೆ ಕಾಂಗ್ರೆಸ್ ನವರು ಅಧಿವೇಶನ ತ್ಯಜಿಸಿ ಪ್ರತಿಭಟಿಸುತ್ತಿದ್ದಾರೆ.
ಅದೇ ಮಾತನ್ನು ನಾನು ಹೇಳುತ್ತೇನೆ ಒಬ್ಬ ಶಾಸಕನಾಗಿ ಕೆಂಪುಕೋಟೆ ಮೇಲೆ ಬಾಗದ್ವಜ ಹಾರಿಸಿಯೇ ತಿರುತ್ತೇವೆ ಎಂದು ಹೇಳಿ ಮತ್ತೊಮ್ಮೆ ದೇಶಪ್ರೇಮಿಗಳ ಆಕ್ರೋಶಕ್ಕೆ ಒಳಗಾಗಿದ್ದಾರೆ.
ಇದೀಗ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ನಗರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅನಿಲ್ ಪೈ ರವರು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರೊಬ್ಬರು ಸಂವಿಧಾನ ವಿರೋಧಿ ಹೇಳಿಕೆ ನೀಡಿದ್ದು ತಕ್ಷಣವೇ ಅವರ ಮೇಲೆ ಪ್ರಕರಣ ದಾಖಲಿಸಬೇಕೆಂದು ಬೆಳ್ತಂಗಡಿ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಪೂಂಜಾ ವಿರುದ್ಧ ದೂರು ದಾಖಲಿಸಿದ್ದಾರೆ.