dtvkannada

'; } else { echo "Sorry! You are Blocked from seeing the Ads"; } ?>

ಮಂಗಳೂರು: ಕರಾವಳಿಯ ಬರಹಗಾರರ ಒಕ್ಕೂಟ ಪೆನ್‌ಪಾಯಿಂಟ್ ಸ್ನೇಹ ವೇದಿಕೆ ಇದರ ವಾರ್ಷಿಕೋತ್ಸವದ ಪ್ರಯುಕ್ತ ಹಲವು ಸ್ಪರ್ಧೆಗಳು ನಡೆಯುತ್ತಿದ್ದು, ಇವತ್ತು ಪೆನ್‌ಪಾಯಿಂಟ್ ವತಿಯಿಂದ ‘ಇಶಲ್ ನೈಟ್’ ಇಸ್ಲಾಮಿಕ್ ಮದ್ಹ್ ಆಲಾಪನೆ ಸ್ಪರ್ಧೆ ನಡೆಯಲಿದೆ.

ಈ ಸ್ಪರ್ಧೆಯಲ್ಲಿ ಕರಾವಳಿಯ ಮೂವತ್ತಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಗಾಯನಪ್ರೇಮಿಗಳು ಈ ರಸನಿಮಿಷಕ್ಕಾಗಿ ಕಾಯುತ್ತಿದ್ದಾರೆ‌.

'; } else { echo "Sorry! You are Blocked from seeing the Ads"; } ?>

ವಾಟ್ಸಪ್ ಎಂಬ ಸಾಮಾಜಿಕ ಜಾಲತಾಣದ ಮೂಲಕ ವಿಶಿಷ್ಠ, ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಜೊತೆಗೆ ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಗ್ರೂಪಿನ ಸದಸ್ಯರು ಬರಹಗಳ ಮೂಲಕ ಧ್ವನಿಯೆತ್ತಿ ಯಶಸ್ವಿ ಕಂಡಿದ್ದು ಇಲ್ಲಿ ಸ್ಮರಿಸಬಹುದಾಗಿದೆ.

ಈ ಗ್ರೂಪಿನಲ್ಲಿ ಈ ಹಿಂದೆಯೂ ಕವನ, ಚುಟುಕು, ರಶಪ್ರಶ್ನೆ, ಕ್ವಿಝ್ ಸೇರಿದಂತೆ ಮುಂತಾದ ಸ್ಪರ್ದೆಗಳನ್ನು ಆಯೋಜಿಸಿದ್ದು, ಜೊತೆಗೆ ಇದೇ ಮಾರ್ಚ್ 27 ರಂದು ಪೆನ್ ಪಾಯಿಂಟ್ ಗ್ರೂಪಿನ ಸದಸ್ಯರಿಗಾಗಿ ಕ್ರಿಕೆಟ್ ಪಂದ್ಯಾಕೂಟವನ್ನೂ ಆಯೋಜಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಇಂದು ಇಸ್ಲಾಮಿಕ್ ಗಾನ ಕಲರವ ನಡೆಯಲಿದೆ.

'; } else { echo "Sorry! You are Blocked from seeing the Ads"; } ?>

ಸ್ಪರ್ಧೆಗಿಂತ ಮುಂಚಿತವಾಗಿ ಕರ್ನಾಟಕ ಮತ್ತು ಕೇರಳದ ವಿವಿಧ ಭಾಗಗಳಿಂದ ಮದ್ಹ್, ಬುರ್ದಾ, ನಾತ್ ಕ್ಷೇತ್ರಗಳಲ್ಲಿ ಹೊಸ ತಲ್ಲಣವನ್ನೇ ಸೃಷ್ಟಿಸಿರುವ ಗಾಯಕರಾದ ಶಮ್ಮಾಸ್ ಉಳ್ಳಾಲ, ಅಸ್ತರ್ ಮಂಗಳೂರು, ಮಶೂಫ್ ಶಿರ್ವಾ, ಅನೀಸ್ ಕ್ಯಾಲಿಕಟ್ ಹಾಗೆಯೇ ಜುರೈಝ್ ಪೆರುವಾಜೆ ಮುಂತಾದವರಿಂದ ಇಶಲ್ ವಿರುನ್ನು ಕೂಡ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ

'; } else { echo "Sorry! You are Blocked from seeing the Ads"; } ?>

By dtv

Leave a Reply

Your email address will not be published. Required fields are marked *

error: Content is protected !!