ಮಡಿಕೇರಿ: ಕೊಡಗು ಬ್ಲಡ್ ಡೋನರ್ಸ್ 3ನೇ ವಾರ್ಷಿಕೋತ್ಸವ ಪ್ರಯುಕ್ತ ಹುತಾತ್ಮ ಯೋಧ ವಿರಾಜಪೇಟೆಯ ಅಲ್ತಾಫ್ ಅಹಮ್ಮದ್ ಅವರ ಸ್ಮರಣಾರ್ಥವಾಗಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಹಾಗೂ ನಾಪೊಕ್ಲುವಿನ ನಾಲ್ಕುನಾಡು ಬ್ಲಡ್ ಡೋನರ್ಸ್ ಜಂಟಿ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರ ಮಡಿಕೇರಿ ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿ️ರವು ಮಡಿಕೇರಿಯ ಕಮ್ಯುನಿಟಿ ಹಾಲ್‍ನಲ್ಲಿ ಯಶಸ್ವಿಯಾಗಿ ನಡೆಯಿತು.
ಸಾರ್ವಜನಿಕ ರಕ್ತದಾನ ಶಿಬಿ️ರವನ್ನು ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಮೇಜರ್ ಡೇವಿಡ್ ವೇಗಸ್ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ವ್ಯೆಜ್ಞಾನಿಕವಾಗಿ ಜಗತ್ತು ಎಷ್ಟೇ ಮುಂದುವರಿದಿದ್ದರೂ ಮಾನವ ದೇಹದ ಹೊರತಾಗಿ ರಕ್ತ ಉತ್ಪಾದಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕೆಂದು ಕರೆ ನೀಡಿದರು
ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಬಿ️.ಆರ್.ಸವಿತಾ ರೈ ಮಾತನಾಡಿ, ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಿದೆ. ರಕ್ತದ ಅವಶ್ಯಕತೆ ಉಂಟಾದಾಗ ಮಾತ್ರ ಅದರ ಮಹತ್ವ ಪ್ರತಿಯೊಬ್ಬರಿಗೂ ಅರಿವಾಗುತ್ತದೆ. ರಕ್ತದಾನದ ವಿಚಾರದಲ್ಲಿ ಯಾವುದೇ ಜಾತಿ ಧರ್ಮ ಗಣನೆಗೆ ಬರುವುದಿಲ್ಲ ಎಂದು ಹೇಳಿದರು.
ಶಿಬಿ️ರದಲ್ಲಿ ಒಟ್ಟು ಸುಮಾರು 25ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿ ಜೀವದಾನಿಗಳಾದರು. ವೇದಿಕೆಯಲ್ಲಿ ಕೊಡಗು ಬ್ಲಡ್ ಡೋನರ್ಸ್ ಅಧ್ಯಕ್ಷ ಹಾಗೂ ರಕ್ತದಾನಿಯೂ ಆಗಿರುವ ಕ್ರಿಯೇಟಿವ್ ಖಲೀಲ್, ಬ್ಲಡ್ ಡೋನರ್ಸ್ ಉಪಾಧ್ಯಕ್ಷ ಮೈಕಲ್ ವೇಗಸ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಕಾರ್ಯನಿರ್ವಾಹಕರಾದ ಅಲಿ ಪರ್ಲಡ್ಕ, ಚಾಮರಾಜನಗರದ ಮಾಜಿ ಯೋಧ ರೇವಣ್ಣ, ನಗರಸಭೆ ಸದಸ್ಯ ಬಷೀರ್, ಬ್ಲಡ್ ಡೋನರ್ಸ್ ಕಾರ್ಯದರ್ಶಿ ಸುಕುಮಾರ್, ಡಾ.ಗಾಯತ್ರಿ, ಮೇರಿ ವೇಗಸ್ ಮತ್ತಿತರರು ಉಪಸ್ಥಿತರಿದ್ದರು.
ಯಶಸ್ವಿ ಕಾರ್ಯಕ್ರಮದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯ ಕಾರ್ಯವಿರ್ವಾಹಕರಾದ ಶಾಫಿ ಮಾಣಿ, ರಿಯಾಝ್ ಕಣ್ಣೂರು, ಜುನೈದ್ ಬಂಟ್ವಾಳ, ಇಂಝಮಾಮ್ ಕಳಾಯಿ, ಫೈಝಲ್ ವಳಚ್ಚಿಲ್, ನೌಶಾದ್ ಮಂಚಿ, ಹಾಗೂ ಕೊಡಗು ಬ್ಲಡ್ ಡೋನರ್ಸ್ ಮತ್ತು ನಾಲ್ಕುನಾಡು ಬ್ಲಡ್ ಡೋನರ್ಸ್ ಸಂಸ್ಥೆಯ ಕಾರ್ಯನಿರ್ವಾಹಕರು, ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.