ಪುತ್ತೂರು: ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೇರ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2 ನೇ ರ್‍ಯಾಂಕ್ ಪಡೆಯುವುದರೊಂದಿಗೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕಗೊಂಡಿರುವ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಮುಡಾಲ ಹಸ್ತಾ ಶೆಟ್ಟಿಯವರಿಗೆ ವರ್ತಕ ಸಂಘ (ರಿ) ಕುಂಬ್ರ ಇದರ ವತಿಯಿಂದ ಸನ್ಮಾನ ಕಾರ್ಯಕ್ರಮ ಮಾ.6ರಂದು ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್‌ನಲ್ಲಿ ನಡೆಯಿತು.
ಹಲವಾರು ವರ್ಷಗಳಿಂದ ಪುತ್ತೂರು ತಾಲೂಕಿನಾದ್ಯಂತ ಸಾಮಾಜಿಕ ಕಾರ್ಯಕರ್ತರಿಗೆ, ಕಷ್ಟದಲ್ಲಿರುವವರಿಗೆ,ವಿದ್ಯಾರ್ಥಿಗಳಿಗೆ, ಬಡಜನರಿಗೆ, ಹಾಗು ವರ್ತಕರ ಧ್ವನಿಯಾಗುತ್ತಾ ಇನ್ನುಳಿದಂತೆ ಹಲವಾರು ಹೋರಾಟಗಳಲ್ಲಿ ಭಾಗವಹಿಸಿ ರಾಜ್ಯಾದಂತ ಹೆಸರುವಾಸಿಯಾಗಿರುವ ಕುಂಬ್ರ ವರ್ತಕ ಸಂಘದ ವತಿಯಿಂದ ಹಸ್ತಾ ಶೆಟ್ಟಿಯವರನ್ನು ಶಾಲು ಹೊದಿಸಿ ,ಫಲಪುಷ್ಪ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವರ್ತಕ ಸಂಘದ ಸ್ಥಾಪಕ ಅಧ್ಯಕ್ಷರಾದ ಶ್ಯಾಂ ಸಂದರ್ ರೈ ಕೊಪ್ಪಳ ಪ್ರಾಸ್ತಾವಿಕವಾಗಿ ಮಾತಾನಾಡಿದರು.ಸಂಘದ ಅಧ್ಯಕ್ಷರಾದ ಮಾಧವ ರೈ ಮಾತಾಡಿ ಮುಂದಿನ ವೃತ್ತಿ ಜೀವನಕ್ಕೆ ಶುಭಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹರ್ಷಾರವರು ಚಿಕ್ಕಂದಿನಿಂದಲೂ ಹಲವಾರು ಕಷ್ಟನಷ್ಟಗಳ ಜೊತೆ,ಏರುಪೇರುಗಳನ್ನು ಸಹಿಸಿ ಈ ಮಟ್ಟಕ್ಕೆ ತಲುಪಿದ್ದೇನೆ. ಇದರಲ್ಲಿ ನನ್ನ ತಂದೆ ತಾಯಿಯ ಪಾತ್ರದ ಜೊತೆಗೆ ನಿಮ್ಮ ಸಂಘದ ಒರ್ವ ಸದಸ್ಯರಾದ ಅಡಿಕೆ ವ್ಯಾಪಾರಿಯು ನೀಡಿದ ಆ ಒಂದು ಸಹಾಯವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ ಎಂದರು.ಮುಂದಿನ ದಿನಗಳಲ್ಲಿ ಸಮಾಜಕ್ಕೆ ಒಳಿತಾಗುವ ಕೆಲಸಗಳನ್ನು ಮಾಡುತ್ತಾ ನನ್ನಿಂದಾಗುವ ಎಲ್ಲಾ ಸಹಾಯವು ಬಡಜನತೆಗೆ ನೀಡಲಿದ್ದೇನೆ ಹೇಳುತ್ತಾ ಸನ್ಮಾನ ನಡೆಸಿದ ಜನಪರ ಕಾಳಜಿಯುಳ್ಳ ವರ್ತಕ ಸಂಘಕ್ಕೆ ಅಭಾರಿಯಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ವರ್ತಕ ಸಂಘದ ಪ್ರ.ಕಾರ್ಯದರ್ಶಿ ಅಝರ್ ಷಾ ಕುಂಬ್ರ,ಮಾಜಿ ಅಧ್ಯಕ್ಷರಾದ ಮೆಲ್ವೀನ್ ಮೊಂತೆರೋ, ನಿಶ್ಮಿತಾ ಕಾಂಪ್ಲೆಕ್ಸ್ ನ ಪುರಂದರ ರೈ ಕೋರಿಕಾರು, ಸದಸ್ಯರಾದ ಉದಯ ಆಚಾರ್ಯ, ಪದ್ಮನಾಭ ಆಚಾರ್ಯ,ಗೋಪಾಲ ರೈ ಹೋಟೆಲ್,ರೇಶ್ಮಾ ಮೇಲ್ವಿನ್,ಶುಭಉದಯ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವರ್ತಕ ಸಂಘದ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್.ಸ್ವಾಗತಿಸಿ ವಂದಿಸಿದರೆ ಮಾಜಿ ಅಧ್ಯಕ್ಷರಾದ ನಾರಾಯಣ ರೈ ಕುರಿಕ್ಕಾರ ಧನ್ಯವಾದ ಅರ್ಪಿಸಿದರು.
ಹಸ್ತಾ ಶೆಟ್ಟಿ ನಡೆದು ಬಂದ ಹಾದಿಯ ಕಿರು ಪರಿಚಯ: ಶ್ರೀಯುತ ಹಸ್ತಾ ಶೆಟ್ಟೆಯವರು ಕಟ್ಟಡ ಕಾರ್ಮಿಕರ ಸಂಘದ ಕುಂಬ್ರ ವಲಯದ ಅಧ್ಯಕ್ಷ ಪುರಂದರ ಶೆಟ್ಟಿ ಮತ್ತು ತಾಯಿ ಪ್ರಸ್ತುತ ಕುಂಬ್ರದ ಸಹಕಾರಿ ಬ್ಯಾಂಕಿನ ನಿರ್ದೇಶಕಿಯಾಗಿರುವ ವಾರಿಜಾಕ್ಷಿ ಮುಡಾಲರವರ ಮೂವರು ಮಕ್ಕಳಲ್ಲಿ ಎರಡು ಗಂಡು ಮತ್ತು ಒರ್ವ ಪುತ್ರಿಯಾಗಿರುತ್ತಾರೆ.
ಈ ದಂಪತಿಗಳಿಗೆ ಇವರು ಮೂರನೇ ಪುತ್ರಿಯಾಗಿ ೧೮ ಫೆಬ್ರವರಿ ೧೯೯೭ ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಿ ಪ್ರೌಢ ಶಿಕ್ಷಣ ಭೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಾಗೂ ಪಿಯುಸಿ ವ್ಯಾಸಂಗವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಉಜಿರೆಯಲ್ಲಿ ಮುಗಿಸಿರುತ್ತಾರೆ.
ತದನಂತರ ನಾಲ್ಕು ವರ್ಷದ ಡಿಗ್ರಿಯನ್ನು ಅರಣ್ಯ ಮಹಾ ವಿದ್ಯಾಲಯ ಪೊನ್ನಂಪೇಟೆಯಲ್ಲಿ ಸಂಪೂರ್ಣಗೊಳಿಸಿದ್ದಾರೆ.ಪ್ರೌಢಶಾಲೆ, ಪಿಯುಸಿ ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿ ತುಳು ಭಾಷಣದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ,ಜನವರಿ ೨೭ರಂದು ನಡೆಯುವ ರಾಷ್ಟ್ರಪತಿ ರ್ರ್ಯಾಲಿಯಲ್ಲಿ ಎನ್.ಸಿ.ಸಿ.ಯಲ್ಲಿ ಭಾಗವಹಿಸಿದಲ್ಲದೆ ಅರಣ್ಯ ಮಹಾ ವಿದ್ಯಾಲಯ ಪೊನ್ನಂಪೇಟೆಯಲ್ಲಿ”ಬೆಷ್ಟ್ ಔಟ್‌ಗೊಯಿಂಗ್ ಸ್ಪೊರ್ಟ್ಸ್ ಪರ್ಸನ್” ಎಂಬ ಬಿರುದನ್ನು ಗಳಿಸಿದ್ದ ಹೆಗ್ಗಳಿಕೆಗೆ ಪಾತ್ರವಾಗಿರುತ್ತಾರೆ.
ಇದೀಗ ಜೂನ್ ೨೦೧೯ ರಂದು ಉಪವಲಯ ಅರಣ್ಯ ಅಧಿಕಾರಾಯಾಗಿ ಆಯ್ಕೆಯಾಗಿದ್ದು ೧೫ ತಿಂಗಳ ತರಬೇತಿ ಮುಗಿಸಿ ರಾಜ್ಯಕ್ಕೆ ೨ ನೇ ರ್ರ್ಯಾಂಕ್ ಅನ್ನು ಪಡೆದಿರುತ್ತಾರೆ.ಅಕ್ಟೊಬರ್ ೨೦೨೦ ರಂದು ಕುಂದಾಪುರ ವಲಯದಲ್ಲಿ ಉಪವಲಯ ಅರಣ್ಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಪ್ರಸ್ತುತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಫಾರೆಷ್ಟ್ ವಿಭಾಗದಲ್ಲಿ ರಾಜ್ಯಕ್ಕೆ ೨ನೇ ರ್ರ್ಯಾಂಕ್ ಪಡೆದಿರುತ್ತಾರೆ ಎಂದು ತಿಳಿಸಿದ್ದಾರೆ.