ಉಳ್ಳಾಲ, ಮಾ.13: ಅಲ್ ಮಿಹ್ರಾಜ್ ಜುಮಾ ಮಸೀದಿ ಮಾರ್ಗತ್ತಲೆ ಹಾಗೂ ಸೆವೆನ್ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಸಹಭಾಗಿತ್ವದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಕ್ತನಿಧಿ, ಮಂಗಳೂರು ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ಇಂದು ಉಳ್ಳಾಲದ ಮಾರ್ಗತ್ತಲೆಯ ಮಹ್ದನುಲ್ ಉಲೂಮ್ ಮದರಸದಲ್ಲಿ ಯಶಸ್ವಿಯಾಗಿ ನಡೆಯಿತು.
ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟನೆಗೈದು ಮಾತನಾಡಿದ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್, ಒಂದು ಜೀವವು ಸಾವು ಬದುಕಿನ ಹೋರಾಟದಲ್ಲಿ ರಕ್ತ ಶ್ರೇಷ್ಠ ಪಾತ್ರ ವಹಿಸುತ್ತದೆ. ರಕ್ತದಾನ ಮಾಡುವುದರಿಂದ ಜೀವ ಉಳಿಸಬಹುದಾಗಿದೆ. ಸ್ಥಳೀಯ ಸಂಘಸಂಸ್ಥೆಯೊಂದಿಗೆ ಕೈ ಜೋಡಿಸಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆ ಆಯೋಜನೆ ಮಾಡಿದಂತಹ ರಕ್ತದಾನ ಶಿಬಿರ ಒಂದು ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ಹೇಳಿದರು.
ಯಶಸ್ವಿ ರಕ್ತದಾನ ಶಿಬಿರ ಕಾರ್ಯಕ್ರಮಕ್ಕೆ ಆಗಮಿಸಿದ ನಗರ ಸಭೆ ಉಪಾಧ್ಯಕ್ಷರಾದ ಅಯ್ಯೂಬ್ ಮಂಚಿಲ ಹಾಗೂ ರಾಜೇಶ್ ಗುರಿಕಾರರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಹಾಗೂ ಶಿಬಿರ ಆಯೋಜಿಸಿದ ಆಯೋಜಕರ ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯ ಎಲ್ಲಾ ಕಾರ್ಯನಿರ್ವಾಹಕರ ಕಾರ್ಯವನ್ನು ಮೆಚ್ಚಿ ಶ್ಲಾಗಿಸಿದರು. ಮಾರ್ಗತ್ತೆಲೆ ಜುಮಾ ಮಸೀದಿ ಉಸ್ತಾದರಾದ ಉಸ್ಮಾನ್ ಸಖಾಫಿ ರವರು ಪ್ರಾರ್ಥನೆ ಮಾಡಿದರು.
ಜೀವದಾನಿಯಾದ 109 ಜನಸ್ನೇಹಿ ರಕ್ತದಾನಿಗಳು:
ರಕ್ತದಾನ ಶಿಬಿರದಲ್ಲಿ ಒಟ್ಟು 109 ಮಂದಿ ರಕ್ತದಾನಿಗಳು ಸ್ವಯಂಪ್ರೇರಿತ ರಕ್ತದಾನ ಮಾಡುವ ಮೂಲಕ ವಿವಿಧ ರೀತಿಯ ರೋಗಕ್ಕೆ ತುತ್ತಾಗಿರುವ ರೋಗಿಗಳ ಜೀವವನ್ನು ಉಳಿಸುವ ಕಾರ್ಯದಲ್ಲಿ ಕೈ ಜೋಡಿಸಿದರು.
ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯ ಕಾರ್ಯನಿರ್ವಾಹಕರಾದ ಇಮ್ರಾನ್ ಮದಕ ಮಾತನಾಡಿ ಸಂಸ್ಥೆಯ ಕಾರ್ಯವೈಕರಿಯ ಬಗ್ಗೆ ತಿಳಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ನವೀನ್ ಡಿ ಸೋಜ ಅಧ್ಯಕ್ಷರು ಸೆವೆನ್ ಸ್ಟಾರ್ ಮಾರ್ಗತ್ತಲೆ, ಸಿದ್ದೀಕ್ ಹಸನ್ ಅಧ್ಯಕ್ಷರು INTUC ಯುವವಿಭಾಗ ಮಂಗಳೂರು ಕ್ಷೇತ್ರ, ಶಾಕೀರ್ ಕಾರ್ಯದರ್ಶಿ ಜುಮಾ ಮಸೀದಿ ಮಾರ್ಗತ್ತಲೆ, ತ್ವಾಹ ಅಳೇಕಲ, ಸಾದಿಕ್ ಮಾರ್ಗತ್ತಲೆ ಹಾಗೂ ಬ್ಲಡ್ ಹೆಲ್ಪ್ ಲೈನ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ನಿಸಾರ್ ಉಳ್ಳಾಲ ಹಾಗೂ ಮುಜೀದ್ ಆಲಂ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಲವು ಗಣ್ಯರಿಗೆ ಶಾಲು ಹೊದಿಸಿ ಸನ್ಮಾನ ಮಾಡಲಾಯಿತು.
ರಕ್ತದಾನ ಮಾಡಿ ಮಾನವೀಯತೆ ಮೆರೆದ ಊರಿನ ಸರ್ವ ಸಹೃದಯೀ ದಾನಿಗಳಿಗೂ, ಕಾರ್ಯಕ್ರಮದ ಯಶಸ್ಸಿಗಾಗಿ ಹಗಲಿರುಳು ಶ್ರಮಿಸಿದ ಅಲ್ ಮಿಹ್ರಾಜ್ ಜುಮಾ ಮಸೀದಿಯ ಹಾಗೂ ಸೆವೆನ್ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ & ಕಲ್ಚರಲ್ ಅಸೋಸಿಯೇಷನ್ ಇದರ ಎಲ್ಲಾ ಪದಾಧಿಕಾರಿಗಳಿಗೂ, ರಕ್ತನಿಧಿಯ ಸಿಬ್ಬಂದಿ ವರ್ಗಕ್ಕೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಕಾರ್ಯನಿರ್ವಾಹಕರು ಕೃತಜ್ಞತೆ ಸಲ್ಲಿಸಿದರು.
ಮಂಗಳೂರ ರಿಯಾಝ್ ಕಾರ್ಯಕ್ರಮವನ್ನು ನಿರೂಪಿಸಿದರು.