dtvkannada

ಮಂಚಿ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ ಫಾರಂ ಮಂಚಿ ಹಾಗೂ ಕೆಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ನಿನ್ನೆ ಮಂಚಿಯ ನೂಜಿಬೈಲು ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು

ಬೃಹತ್ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಸುಮಾರು 76 ಯೂನಿಟ್ ರಕ್ತ ಸಂಗ್ರವಾಯಿತು.

ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು ಮಂಚಿ ಗ್ರಾಮ ಪಂಚಾಯತಿಯ ಆಶ ಕಾರ್ಯಕರ್ತರಾದ ಶ್ರೀಮತಿ ಪುಷ್ಪಲತಾ ಹಾಗೂ ಕೊಳ್ನಾಡು ಗ್ರಾಮ ಪಂಚಾಯಿತಿ ಆಶ ಕಾರ್ಯಕರ್ತರಾದ ಶ್ರೀಮತಿ ಗೀತಾ ಕೇಶವ್ ಇವರಿಗೆ ಸನ್ಮಾನಿಸಲಾಯಿತು

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಶೀರ್ MK ಅಧ್ಯಕ್ಷರು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಮಂಚಿ ವಹಿಸಿಕೊಂಡಿದ್ದರು. ಉದ್ಘಾಟನೆಯನ್ನು ಶ್ರೀ ನಾರಾಯಣ ಭಟ್ ನೂಜಿಬೈಲು ಸಂಚಾಲಕರು ನೂಜಿಬೈಲು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಂಚಿ ನೆರವೇರಿಸಿದರು.

PFI ಕಲ್ಲಡ್ಕ ಡಿವಿಷನ್ ಅಧ್ಯಕ್ಷರಾ ಸಿದ್ದೀಕ್ ಕಲ್ಲಡ್ಕ ದಿಕ್ಸೂಚಿ ಭಾಷಣ ಗೈದರು ನಿತ್ಯಾಧರ್ ಸಾಲೆತ್ತೂರು ಇದರ ಧರ್ಮಗುರುಗಳಾದ ಹೆಂಡ್ರಿ ಡಿಸೋಜಾ SFX, MD ಮಂಚಿ ಸಹ ಉಪನ್ಯಾಸಕರು ಮೆಲ್ಕರ್ ಮಹಿಳಾ ಪದವಿ ಕಾಲೇಜು ಮಾರ್ನಬೈಲು, ಅಶ್ರಫ್ ಮಂಚಿ ಸಂಘಟನಾ ಕಾರ್ಯದರ್ಶಿ SDPI ಮಂಗಳೂರು ವಿಧಾನಸಭಾ ಕ್ಷೇತ್ರ, ಅರಫಾ ಮಂಚಿ ಪ್ರಧಾನ ಕಾರ್ಯದರ್ಶಿAPCR ದ.ಕ. ಜಿಲ್ಲೆ, ಖಾದರ್ ಮೂಸ ಅಧ್ಯಕ್ಷರು ಕಾಂಗ್ರೆಸ್ ಕೊಲ್ನಾಡು ಗ್ರಾಮ ಸಮಿತಿ ಹಾಗೂ ಶಮೀಮಾ ಮರಿಯಂ ಹಳೆಯಂಗಡಿ ಕೌನ್ಸಿಲ್ ಮೆಂಬರ್ ನ್ಯಾಷನಲ್ ವಿಮೆನ್ಸ್ ಫ್ರಂಟ್ ಹಳೆಯಂಗಡಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದರು

ಈ ಸಂದರ್ಭದಲ್ಲಿ ಶ್ರೀ ರಾಜೇಶ್ ಕೊಟ್ಟಾರಿ, ಮಹಮ್ಮದ್ ಕೋಕಲ, ‌MA ಹನೀಫ್ ,ಫೈಝಲ್ ಮಂಚಿ ಅಬೂಬಕ್ಕರ್ ನಿರ್ಬೈಲು ಹಾಗೂ ಕೊಲ್ನಾಡು ಗ್ರಾಮ ಪಂಚಾಯತಿನ ಸದಸ್ಯರಾದ ಮಹಮ್ಮದ್ ಮಂಚಿ ಉಪಸ್ಥಿತರಿದ್ದರು ಅಲ್ಲದೆ ಸ್ಥಳೀಯ ಸಂಘ ಸಂಸ್ಥೆಗಳ ನಾಯಕರು ವೇದಿಕೆಯನ್ನು ಹಂಚಿಕೊಂಡಿದ್ದರು.

ಕಾರ್ಯಕ್ರಮದ ಸ್ವಾಗತವನ್ನು D N ಫಾರೂಕ್ ಮಂಚಿ ನೆರವೇರಿಸಿದರು ಕಾರ್ಯಕ್ರಮವನ್ನು ನಿರೂಪಣೆ ಹಾಗೂ ಧನ್ಯವಾದವನ್ನು ಇಕ್ಬಾಲ್ ಮಂಚಿ ನಡೆಸಿಕೊಟ್ಟರು

By dtv

Leave a Reply

Your email address will not be published. Required fields are marked *

error: Content is protected !!