ಗೋವಾ: ಗೋಲ್‌ಕೀಪರ್ ಲಕ್ಷ್ಮೀಕಾಂತ್ ಕಟ್ಟಿಮನಿ ಅವರು ತಡೆದ ಮೂರು ಅದ್ಭುತ ಸೇವ್’ನಿಂದ, ಹೈದರಾಬಾದ್ ಎಫ್‌ಸಿ ಭಾನುವಾರ ನಡೆದ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಅನ್ನು ಪೆನಾಲ್ಟಿ ಶೂಟ್-ಔಟ್‌ನಲ್ಲಿ ಸೋಲಿಸಿ ತಮ್ಮ ಮೊದಲ ಇಂಡಿಯನ್ ಸೂಪರ್ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಜವಹಾರ್ ಲಾಲ್ ನೆಹರೂ ಮೈದಾನದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಹೈದರಬಾದ್ ತಂಡವು, ಬಲಿಷ್ಟ ಕೇರಳ ಬ್ಲಾಸ್ಟರ್ಸ್ ತಂಡವನ್ನು ಪೆನಾಲ್ಟಿ ಶೂಟೌಟ್’ನಲ್ಲಿ ರೋಚಕವಾಗಿ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ನಿಗದಿತ ಮತ್ತು ಹೆಚ್ಚುವರಿ ಸಮಯದಲ್ಲಿ 1-1 ರಿಂದ ಪಂದ್ಯ ಮುಕ್ತಾಯಗೊಂಡ ನಂತರ ಹೈದರಾಬಾದ್ ಶೂಟ್-ಔಟ್‌ನಲ್ಲಿ 3-1 ಗೋಲುಗಳಿಂದ ಕೇರಳವನ್ನು ಸೋಲಿಸಿತು. ಹೈದರಾಬಾದ್ ಪರ ಜೋವೊ ವಿಕ್ಟರ್, ಖಾಸ್ಸಾ ಕ್ಯಾಮರಾ ಮತ್ತು ಹಾಲಿಚರಣ್ ನರ್ಝರಿ ಗೋಲು ಗಳಿಸಿದರೆ, ಆಯುಷ್ ಅಧಿಕಾರಿ ಮಾತ್ರ ಶೂಟೌಟ್‌ನಲ್ಲಿ ಗುರಿಯನ್ನು ಕಂಡುಕೊಂಡರು.
2014, 2016 ಸೇರಿದಂತೆ ಮೂರನೇ ಬಾರಿ ಫೈನಲ್ ಪ್ರವೇಶಿಸಿದ ಕೇರಳ ಬ್ಲಾಸ್ಟರ್ಸ್ ದಿಟ್ಟ ಹೋರಾಟದ ಪ್ರದರ್ಶನದ ನೀಡಿದರೂ ಮತ್ತೆ ಸೋಲನುಭವಿಸಿತು.
Highlits ವೀಡಿಯೋ ನೋಡಿ: