dtvkannada

ಅಡ್ಡೂರು: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಅಡ್ಡೂರು ಹಾಗೂ KMC ಆಸ್ಪತ್ರೆ ಮಂಗಳೂರು ಮತ್ತು ಲೈಫ್ ಲೈನ್ ಹೆಲ್ತ್ ಕೇರ್ ಪ್ಲಸ್ ಕ್ಲಿನಿಕ್ ಬಿಸಿರೋಡ್ ಇದರ ಸಹಯೋಗದೊಂದಿಗೆ ಉಚಿತ ಹೃದ್ರೋಗ ಮತ್ತು ನೇತ್ರ ತಪಾಸಣಾ ಶಿಬಿರವನ್ನು ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಪಾರಂ ಅಡ್ಡೂರು ಇದರ ಅಧ್ಯಕ್ಷರಾದ ಖಾಸಿಮ್ ಪ್ಯಾರ ಇವರ ಅಧ್ಯಕ್ಷತೆಯಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಯಿತು.

ಶಿಬಿರದಲ್ಲಿ 167 ಮಂದಿ ಹೃದ್ರೋಗ ಹಾಗೂ 214 ಮಂದಿ‌‌ ನೇತ್ರ ತಪಾಸಣೆಯಲ್ಲಿ ಪಾಲ್ಗೊಂಡರು.
KMC ಆಸ್ಪತ್ರೆ ಮಂಗಳೂರು ಇದರ ಖ್ಯಾತ ಹೃದ್ರೋಗ ತಜ್ಞರಾದ Dr. ನರಸಿಂಹ ಪೈ ಯವರು ಹ್ರದಯ ತಪಾಸಣೆಯನ್ನು ನಡೆಸಿಕೊಟ್ಟರು.
ಹಾಗೂ ಲೈಫ್ ಲೈನ್ ಹೆಲ್ತ್ ಕೇರ್ ಪ್ಲಸ್ ಬಿಸಿರೋಡ್ ಇದರ ನೇತ್ರ ತಜ್ಞರಾದ Dr. ಶಾಹಿಕ್ ನೇತ್ರ ತಪಾಸಣೆಯನ್ನು ನಡೆಸಿಕೊಟ್ಟರು.
ರಿಫಾಕ್ಲಿನಿಕ್ ಅಡ್ಡೂರು ಇದರ ವೈದ್ಯರಾದ Dr. EKA ಸಿದ್ದೀಕ್ ರವರು ಆರೋಗ್ಯ ತಪಾಸಣೆ ನಡೆಸಿ ಸಹಕರಿಸಿದರು.

ಈ ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮಾನವೀಯ ಸೇವೆ ಸಲ್ಲಿಸಿದ Dr. ಇಕೆಎ ಸಿದ್ದೀಕ್, Dr.ಸ್ವಾಲಿಹತ್.S, Dr.ಪುಶ್ಪಲತಾ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅದೇ ರೀತಿ ಕೊರೋಣ ಸಂಧರ್ಭದಲ್ಲಿ ರಾತ್ರಿ ಹಗಲೆನ್ನದೆ ಆಕ್ಸಿಜನ್ ಸೇವೆ ಸಲ್ಲಿಸಿದ ರಹಿಮಾನ್‌ ಮೆಡಿಕಲ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿ ಇದರ ಗೌರವಾನ್ವಿತ ಖತೀಬರಾದ ಉಸ್ತಾದ್ ಸದಖತ್ತುಲ್ಲಾ ಫೈಝಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ದುಆ ನೆರವೇರಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ SDPI ರಾಜ್ಯ ಸಮಿತಿ ಸದಸ್ಯರಾದ ಅಬ್ದುಲ್ ಜಲೀಲ್.K, ಬದ್ರಿಯಾ ಜಮಾಅತ್ ಕಮಿಟಿ ಅಡ್ಡೂರು ಇದರ ಅಧ್ಯಕ್ಷರಾದ ಅಹಮದ್ ಬಾವ ಅಂಗಡಿಮನೆ, PFI ಮೆಡಿಕಲ್ ಉಸ್ತುವಾರಿ ಇಲ್ಯಾಸ್ ಬಜ್ಪೆ , ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಯಶವಂತ ಶೆಟ್ಟಿ, ಬದ್ರುಲ್‌ಹುದಾ ಜುಮ್ಮಾ ಮಸ್ಜಿದ್ ಕಾಂಜಿಲಕೋಡಿ ಇದರ ಅಧ್ಯಕ್ಷರಾದ ಅಹ್ಮದ್ ಬಾವ, ಗೌರವಾಧ್ಯಕ್ಷರಾದ MH ಮೊಹಿಯುದ್ದೀನ್, ಬಾಬಾ ಪಕ್ರುದ್ದೀನ್ ಜುಮ್ಮಾ ಮಸ್ಜಿದ್ ಪೊಳಲಿ ಇದರ ಅಧ್ಯಕ್ಷರಾದ ಮೊಹಮ್ಮದ್ ಪೊಳಲಿ, ಹಾಜಿ ಇಸ್ಮಾಯಿಲ್ ಗೇಟ್, ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ AK. ರಿಯಾಝ್, ಅಶ್ರಫ್, ಮನ್ಸೂರ್,ಶಾಹಿಕ್, SDPI ಗುರುಪುರ ಗ್ರಾಮ ಸಮಿತಿಯ ಅಧ್ಯಕ್ಷರಾದ AK ಮುಸ್ತಾಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ಸಂಧರ್ಭದಲ್ಲಿ ಶರೀಫ್ ಗೋಳಿಪಡ್ಪು ಪ್ರಾಸ್ತಾವಿಕವಾಗಿ ಮಾತನಾಡಿದರು ಮತ್ತು ರಹೀಮ್ ಬೊಟ್ಟಿಕ್ಕೆರೆ ಸ್ವಾಗತಿಸಿ ಅಸ್ತಾರ್ B ಕಾರ್ಯಕ್ರಮವನ್ನು ನಿರೂಪಿಸಿದರು.

By dtv

Leave a Reply

Your email address will not be published. Required fields are marked *

error: Content is protected !!