';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಗದಗ: ಸಂತೋಷ್ ಆತ್ಮಹತ್ಯೆ ಕೇಸ್ಗೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪಗೆ ನೈತಿಕತೆ ಇದ್ದರೆ ತಕ್ಷಣವೇ ರಾಜೀನಾಮೆ ನೀಡಬೇಕು ಅಂತಾ ಗದಗದಲ್ಲಿ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಇದರ ಬಗ್ಗೆ ಸೂಕ್ತ ತನಿಖೆಯಾಗಲಿ. ತನಿಖೆಯಲ್ಲಿ ನೀವು ತಪ್ಪಿತಸ್ಥರಲ್ಲ ಎಂದು ಸಾಬೀತಾದರೆ ಮತ್ತೆ ಸಚಿವರಾಗಿ ಅಂತಾ ಮುತಾಲಿಕ್ ಹೇಳಿದ್ದಾರೆ. ರಾಜಿನಾಮೆ ಕೊಟ್ಟು ಈ ಕೂಡಲೇ ಹೊರನಡೆಯಿರಿ, ನಿಮ್ಮ ಆರೋಪ ಸುಳ್ಳಾದರೆ ಮತ್ತೆ ಒಳಬನ್ನಿ ಎಂದಿದ್ದಾರೆ.
ಅಡ್ವಾನಿ ಯವರು ಸಾಕಷ್ಟು ಬಾರಿ ರಾಜಿನಾಮೆ ಕೊಟ್ಟು ಪಕ್ಷದಿಂದ ಹೊರಹೋಗಿ ಆದರ್ಶ ಮೆರೆದಿದ್ದಾರೆ. ನೀವು ರಾಜಿನಾಮೆ ಕೊಟ್ಟ
ತಕ್ಷಣ ತಪ್ಪಿತಸ್ಥರಾಗುವುದಿಲ್ಲ, ನಿಮ್ಮ ಮೇಲೆ ಆಪಾದನೆ ಇರುವ ಮಾತ್ರಕ್ಕೆ ನೀವು ಅಪರಾದಿಯಾಗುವುದಿಲ್ಲ. ಹಾಗಾಗಿ ಈ ಸಂದರ್ಭದಲ್ಲಿ ವಿರೋಧಪಕ್ಷದವರಿಗೆ ಆಹಾರವಾಗುವುದು ಸರಿಯಲ್ಲ. ಆದ್ದರಿಂದ ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಿ ಎಂದು ಆಗ್ರಹಿಸಿದ್ದಾರೆ.