dtvkannada

ಸುಳ್ಯ: ದೋಹ ಕತ್ತರ್ ನಲ್ಲಿ ಉದ್ಯೋಗದಲ್ಲಿರುವ ಮುಸ್ತಫಾ ಅಂಜಿಕ್ಕಾರ್ ಅವರ ನೇತೃತ್ವದಲ್ಲಿ ಸುಳ್ಯದ ಜಯನಗರ ವಸತಿಯಲ್ಲಿರುವ ಬಡ ಮತ್ತು ಅರ್ಹ ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣಾ ಕಾರ್ಯಕ್ರಮವು ಭಾನುವಾರದಂದು ನಡೆಯಿತು.

ಈ ಸಂದರ್ಭ ಮಾತನಾಡಿದ ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷ ಕೆ.ಎಂ.ಮುಸ್ತಫಾ, ಅನಿವಾಸಿ ಭಾರತೀಯ, ಸಮಾಜಸೇವಕ ಮುಸ್ತಫಾ ಅಂಜಿಕ್ಕಾರ್ ಅವರು ಬಡವರಿಗೆ ರಂಝಾನ್ ಕಿಟ್ ವಿತರಿಸುವುದರೊಂದಿಗೆ ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ಕೂಡ ನೆರವು ನೀಡುವ ಮೂಲಕ ಮಾನವೀಯ ಸೇವೆಯಲ್ಲಿ ನಿರತರಾಗಿದ್ದಾರೆ. ಸಮಾಜದಲ್ಲಿರುವವರ ಕಷ್ಟಗಳನ್ನು ನಿವಾರಿಸುವುದು ಪುಣ್ಯದಾಯಕ ಸತ್ಕರ್ಮವಾಗಿದೆ ಎಂದು ಹೇಳಿದರು.

ಅಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ಜಯನಗರ ದುಃಆ ಆಶಿರ್ವಚನ ನೀಡಿದರು.

ಡಾ.ಆರ್.ಬಿ.ಬಶೀರ್ ಪೈಚಾರ್,ಶಾಂತಿನಗರ ಸರಕಾರಿ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನಝೀರ್ ಶಾಂತಿನಗರ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಇಬ್ರಾಹಿಂ ಕೊಕ್ಕೋ ಗಾಂಧಿನಗರ,ಉದ್ಯಮಿ ಅಬ್ದುರ್ರಝಾಖ್ ಕರಾವಳಿ, ಜಯನಗರ ಮಸ್ಜಿದ್ ಮತ್ತು ಮದ್ರಸದ ಮಾಜಿ ಅಧ್ಯಕ್ಷರಾದ ಹಾಜಿ ಅಬ್ದುಲ್ಲ, ಡಿ.ಎಂ.ಅಬೂಬಕರ್, ನವಾಝ್ ಪಂಡಿತ್ ಜಯನಗರ, ಆಸಿಫ್ ಜಯನಗರ, ಮುಹಮ್ಮದ್ ಮಿನ್‌ಹಾಜ್ ಅಂಜಿಕ್ಕಾರ್, ಮುಹಮ್ಮದ್ ಮಿಸ್‌ಬಾಹ್ ಅಂಜಿಕ್ಕಾರ್, ಇಬ್ರಾಹಿಂ ಮುಫಾಝ್ ಅಂಜಿಕ್ಕಾರ್ ಮೊದಲಾದವರು ಉಪಸ್ಥಿತರಿದ್ದರು.
ಹಸೈನಾರ್ ಜಯನಗರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಮಾಡಿದರು.

By dtv

Leave a Reply

Your email address will not be published. Required fields are marked *

error: Content is protected !!