ಧಾರವಾಡ: ರಾಜ್ಯಾದ್ಯಂತ ದೊಡ್ಡ ಸುದ್ದಿ ಮಾಡಿದ್ದ ನುಗ್ಗಿಕೇರಿಯ ಹನುಮಂತ ದೇವಸ್ಥಾನದ ಆವರಣದಲ್ಲಿದ್ದ ನಬೀಸಾಬ್ ಕಲ್ಲಂಗಡಿ ಹಣ್ಣಿನಂಗಡಿ ಧ್ವಂಸ ಮಾಡಿದ ಪ್ರಕರಣಕ್ಕೆ ಶ್ರೀರಾಮ ಸೇನೆ ಕಾರ್ಯಕರ್ತನೊಬ್ಬ ಪ್ರತಿ ದೂರು ದಾಖಲಿಸಿದ್ದಾನೆ.
ದೇವರ ದರ್ಶನದ ಬಳಿಕ ಬಾಯಾರಿಕೆಯಿಂದ ಕಲ್ಲಂಗಡಿ ಹಣ್ಣು ತಿನ್ನಲು ಹೋದಾಗ ಆತ ಕಲ್ಲಂಗಡಿ ಹಣ್ಣಿಗೆ ಎಂಜಲು ಉಗುಳಿ ಮಾರಾಟ ಮಾಡುತ್ತಿದ್ದನು.
ಬಿಳಿ ಶರ್ಟು ಹಾಗೂ ಕಪ್ಪು ಬಣ್ಣದ ಶರ್ಟ್ ಧರಿಸಿದ್ದ ವ್ಯಕ್ತಿ ಅಲ್ಲಿ ಮಾರಾಟ ಮಾಡುತ್ತಿದ್ದ ನಬೀಸಾಬ್ ಅಲ್ಲಿರಲಿಲ್ಲ. ಬೇರೆ ವ್ಯಕ್ತಿ ಇದ್ದರು. ಆತ ಕಲ್ಲಂಗಡಿಗೆ ಉಗುಳಿ ಕೊಟ್ಟ, ಹೀಗೆ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಕೊಟ್ಟಿದ್ದಾನೆ.
ನೀವು ಇದನ್ನು ತಿನ್ನದಿದ್ದರೆ ನಿಮ್ಮನ್ನು ಅಲ್ಲಾ ಮೆಚ್ಚಲ್ಲ ಎಂದು ನಿಂದಿಸಿದ. ಆಗ ವಿರೋಧಿಸಿದಾಗ ಕಲ್ಲಂಗಡಿ ಕೊಯ್ದಂತೆ ನಿಮ್ಮನ್ನು ಕೊಯುತ್ತೇನೆ ಎಂದು ಬೆದರಿಕೆ ಹಾಕಿದ್ದ, ಅದಕ್ಕೆ ಕಲ್ಲಂಗಡಿ ಒಡೆದು ಹಾಕಿದೆವು ಎಂದು ಶ್ರೀರಾಮಸೇನೆ ಕಾರ್ಯಕರ್ತ ಮಹಾನಿಂಗಪ್ಪ ಪ್ರತಿದೂರು ನೀಡಿದ್ದಾರೆ. ಅಲ್ಲಿ ವ್ಯಾಪಾರ ಮಾಡುವ ಮುಸ್ಲಿಂಮರು ದೇವಸ್ಥಾನದ ಆಡಳಿತ ಮಂಡಳಿಯವರನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಏ.9 ರಂದು ಧಾರವಾಡದ ನುಗ್ಗಿಕೇರಿಯ ಹನುಮಂತ ದೇವಸ್ಥಾನದ ಆವರಣದಲ್ಲಿ ಕಲ್ಲಂಗಡಿ ಧ್ವಂಸ ಘಟನೆ ರಾಜ್ಯಾದ್ಯಂತ ವೀಡಿಯೋ ವೈರಲ್ ಆಗಿತ್ತು.
ಈ ಪ್ರಕರಣದಲ್ಲಿ ಹಲವು ಶ್ರೀರಾಮ ಸೇನೆ ಕಾರ್ಯಕರ್ತರು ಬಂಧನವಾಗಿದ್ದರು. ಜೊತೆಗೆ ನಬೀಸಾಬ್‌ಗೆ ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವರು ಆರ್ಥಿಕ ಸಹಾಯ ನೀಡಿದ್ದರು.