';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಮಂಗಳೂರು: ಪ್ರಸಿದ್ದ ಗಾಯಕಿ ಸದಾ ನಗುಮುಖದಿಂದ ಎಲ್ಲವನ್ನು ಸ್ವೀಕರಿಸಿ ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗೆದ್ದ ಮಹಿಳೆ ಎಂದು ಹೊಗಳಿಕೆಯನ್ನು ಸಂಪಾದಿಸಿದ್ದ ಅದ್ಭುತ ಗಾಯಕಿ ಮಂಗಳೂರಿನ ಕದ್ರಿ ನಿವಾಸಿ ಸುರೇಖಾ ಪೈ ಅಸೌಖ್ಯದಿಂದ ನಿನ್ನೆ ಮುಂಜಾನೆ ನಿಧನರಾದರು.
ಜಾಂಡೀಸ್ ಖಾಯಿಲೆಯಿಂದ ಕೂಡ ಬಳಲುತ್ತಿದ್ದ ಇವರು ಆತ್ಮವಿಶ್ವಾಸಕ್ಕೆ ಮತ್ತೊಂದು ಹೆಸರಾಗಿದ್ದರು. ಮೂಲತಃ ಮುಂಬೈಯವರಾದ ಇವರು ಉತ್ತಮ ಗಾಯಕಿಯಾಗಿದ್ದು ಸೋನುನಿಗಮ್ ಸೇರಿದಂತೆ ಹಲವು ದಿಗ್ಗಜರ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದರು.
ಮೃತರ ಸ್ವಗೃಹದಲ್ಲೇ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತೆಂದು ತಿಳಿದು ಬಂದಿದೆ. ಮೃತರು ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.