dtvkannada

ಉಡುಪಿ: ರಾಜ್ಯಾದ್ಯಂತ ದ್ವಿತೀಯ ಪಿಯುಸಿಯ ಅಂತಿಮ ಪರೀಕ್ಷೆ ಆರಂಭಗೊಂಡಿದ್ದು, ಉಡುಪಿಯಲ್ಲಿ ಹಿಜಾಬ್‌ಗಾಗಿ ಕಾನೂನು ಹೋರಾಟ ನಡೆಸುತ್ತಿರುವ ಇಬ್ಬರು ವಿದ್ಯಾರ್ಥಿನಿಯರಾದ ಅಲಿಯಾ ಅಸಾದಿ ಹಾಗೂ ರೇಶಮ್ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನಿರಾಕರಿಸಿದ್ದಕ್ಕೆ ಪರೀಕ್ಷೆ ಬರೆಯದೆ ಪರೀಕ್ಷಾ ಕೇಂದ್ರದಿಂದ ಮನೆಗೆ ವಾಪಾಸಾಗಿದ್ದಾರೆ.

ಇದಕ್ಕೂ ಮುನ್ನ ಪರೀಕ್ಷೆಗೆ ಕೆಲವೇ ಕ್ಷಣಗಳು ಬಾಕಿ ಇರುವಂತೆ ಉಡುಪಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು ಪ್ರವೇಶ ಪತ್ರ ಪಡೆದುಕೊಂಡು ಪರೀಕ್ಷಾ ಕೇಂದ್ರವಾದ ವಿದ್ಯೋದಯ ಕಾಲೇಜಿಗೆ ಬಂದರು.
ಈ ಸಂದರ್ಭ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಮಾಡಿದರು. ಆದರೆ ಸರಕಾರದ ಆದೇಶದಂತೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಇಲ್ಲದ ಕಾರಣ, ಪ್ರಾಂಶುಪಾಲರು ಅವಕಾಶ ನೀಡಲಿಲ್ಲ.

ಈ ಹಿನ್ನೆಲೆಯಲ್ಲಿ 10:15ಕ್ಕೆ ಪರೀಕ್ಷಾ ಕೇಂದ್ರದಿಂದ ಹೊರನಡೆದ ವಿದ್ಯಾರ್ಥಿನಿಯರಿಗೆ ಮನಪರಿವರ್ತನೆಗಾಗಿ ಮತ್ತೆ 30 ನಿಮಿಷಗಳ ಅವಕಾಶಕಲ್ಪಿಸಲಾಯಿತು. ಹಿಜಾಬ್ ತೆಗೆದು ಪರೀಕ್ಷೆ ಬರೆಯಲು ಒಪ್ಪದ ವಿದ್ಯಾರ್ಥಿನಿಯರು
ಪರೀಕ್ಷೆಗೆ ಹಾಜರಾಗುವ ಅವಧಿ‌ ಮುಕ್ತಾಯವಾದ ಕೂಡಲೇ 10.45ಕ್ಕೆ ಪರೀಕ್ಷಾ ಕೇಂದ್ರದಿಂದ ಕಣ್ಣೀರು ಹಾಕುತ್ತಲೇ ವಿದ್ಯಾರ್ಥಿನಿಯರು ಮನೆಗೆ ಹೊರಟರು.

By dtv

Leave a Reply

Your email address will not be published. Required fields are marked *

error: Content is protected !!