ಬಂಟ್ವಾಳ: ಕೆಲವೊಂದು ಕ್ರಿಮಿಗಳ ಧರ್ಮ ಯುದ್ಧಗಳ ಮದ್ಯೆ ಬಂಟ್ವಾಳ ತಾಲೂಕಿನ ಮಣಿನಾಲ್ಕುರು, ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನ ಶುಕ್ರವಾರ ಹೊಸ ಸಂಭ್ರಮಕ್ಕೆ ಸಾಕ್ಷಿಯಾಗಿದ್ದು ಇದೀಗ ಈ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಶ್ರೀ ಮಹಾವಿಷ್ಣು ದೇವಸ್ಥಾನ ಇಳಿಯೂರು ಇದರ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಅಜಿಲಮೊಗರುನ ಮುಸ್ಲಿಂ ಬಾಂಧವರು ಹಸಿರುವಾಣಿ ಹೊರಕಾಣಿಕೆ ನೀಡುವ ಮೂಲಕ
ಕಲುಷಿತಗೊಂಡಿರುವ ಧರ್ಮ ಯುದ್ಧಗಳ ಮದ್ಯೆ ಪ್ರೀತಿ, ಸೌಹಾರ್ದತೆಯನ್ನು ಮತ್ತಷ್ಟು ಜೀವಂತವಾಗಿಸಿದ್ದಾರೆ.
ಇಳಿಯೂರು ವಾರ್ಷಿಕ ಜಾತ್ರಾ ಕಾರ್ಯಕ್ರಮಕ್ಕೆ ಅಜಿಲಮೊಗರು ದರ್ಗಾ ವಠಾರದಿಂದ ದೇವಸ್ಥಾನಕ್ಕೆ, ಮುಸಲ್ಮಾನ ಬಾಂಧವಾರ ಕೃಷಿಗಳಲ್ಲಾದ ಅಡಿಕೆ, ಬಾಳೆ, ತರಕಾರಿ ಹಾಗೂ ಇನ್ನಿತರ ಹಲವಾರು ಬೃಹತ್ ಮಟ್ಟದ ಹಸಿರು ಪದಾರ್ಥಗಳನ್ನು ಹೊರಕಾಣಿಕೆ ನೀಡುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಸೌಹಾರ್ದತೆಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ.
ವಿವಿಧ ರೀತಿಯಲ್ಲಿ ಧರ್ಮ ಧರ್ಮಗಳ ಮಧ್ಯೆ ಕಿಚ್ಚು ಹೊತ್ತಿಸುವ ಕೆಲವೊಂದು ಧರ್ಮ ವಿರೋಧಿಗಳ ನಡುವೆ ಅಜಿಲಮೊಗರುವಿನ ಮುಸಲ್ಮಾನರ ಈ ನಡೆ ಬಗ್ಗೆ ಎಲ್ಲೆಡೆ ಬಾರೀ ಪ್ರಶಂಸೆಗೆ ಪಾತ್ರವಾಗಿದೆ.