ಮಂಗಳೂರು, ಮೇ೧: ಇಂದು ಭಾನುವಾರ ಅರ್ಧಚಂದ್ರ ಕಾಣಿಸದ ಕಾರಣ ಈದ್ ಅಲ್ ಫಿತರ್ ಮಂಗಳವಾರ ಎಂದು ಖಚಿತಪಡಿಸಲಾಗಿದೆ. ಮೇ 3 ರಂದು ಶವ್ವಾಲ್ ಎಂದು ಮುಸ್ಲಿಂ ಪಂಡಿತರು ಖಚಿತಪಡಿಸಿದ್ದಾರೆ.
ಅದರಂತೆ, ನಾಳೆ ಸೋಮವಾರ ರಂಜಾನ್‌ನ ಕೊನೆಯ ದಿನ ಮತ್ತು ಮಂಗಳವಾರ ಶವ್ವಾಲ್‌ನ ಮೊದಲ ದಿನವಾಗಿರುತ್ತದೆ. ಆದ್ದರಿಂದ ನಾಳೆ ಎಂದಿನಂತೆ ರಮಳಾನ್ ದಿನವಾಗಿರುತ್ತದೆ ಎಂದು ತಿಳಿದು ಬಂದಿದೆ.
ಆದ್ದರಿಂದ ನಾಳೆ 30ನೇ ಉಪವಾಸ ಎಂದು ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್, ಪಾಣಕ್ಕಾಡ್ ಸಯ್ಯಿದ್ ಸಾದಿಕಲಿ ಶಿಹಾಬ್ ತಂಙಳ್ ಮತ್ತು ಸಮಸ್ತ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್, ಕೋಝಿಕ್ಕೋಡ್ ಖಾಝಿಗಳಾದ ಸಯ್ಯಿದ್ ಮುಹಮ್ಮದ್ ಕೋಯ ತಂಙಳ್ ಜಮಲುಲ್ಲೈಲಿ ಮತ್ತು ಸಯ್ಯಿದ್ ನಾಸರ್ ಹಯ್ಯ್ ಶಿಹಾಬ್ ತಂಙಳ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲೂ ಈದುಲ್ ಫಿತ್ (ರಮಝಾನ್) ಮಂಗಳವಾರ ( ಮೇ .3 ) ಆಚರಣೆ ಮಾಡಲಾಗುವುದು ಎಂದು ಚಂದ್ರ ದರ್ಶನ ಸಮಿತಿ ಪ್ರಕಟಿಸಿದೆ . ರವಿವಾರ ರಮಝಾನ್ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಸ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ಅಮೀರ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದಲ್ಲಿ ನಡೆದ ಚಂದ್ರ ದರ್ಶನ ಸಮಿತಿಯ ಸಭೆಯಲ್ಲಿ ಮಂಗಳವಾರ ಹಬ್ಬ ಆಚರಣೆ ದಿನ ಘೋಷಿಸಲಾಯಿತು