';
}
else
{
echo "Sorry! You are Blocked from seeing the Ads";
}
?>
';
}
else
{
echo "Sorry! You are Blocked from seeing the Ads";
}
?>
ಪುತ್ತೂರು: ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟು ಮತ್ತೋರ್ವ ಗಂಭೀರ ಗಾಯಗೊಂಡ ಘಟನೆಯ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಕುಂಬ್ರ ಸಮೀಪದ ಅರಿಯಡ್ಕ ನಿವಾಸಿ ಆದಂ ಎಂಬವರ ಪುತ್ರ ಸಿನಾನ್(18) ಎಂದು ತಿಳಿದು ಬಂದಿದೆ.
ಗಂಭೀರ ಗಾಯಗೊಂಡ ಯುವಕನನ್ನು ಸಂಟ್ಯಾರ್ ನಿವಾಸಿ ಕುಂಞಿಚ್ಚ ಎಂಬವರ ಮಗ ಆಶಿರ್ ಅಪ್ಪು(17)ಎಂದು ತಿಳಿದು ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂಬ್ರದಿಂದ ಬೈಪಾಸ್ ರಸ್ತೆಯಾಗಿ ಮಾಣಿ ಕಡೆ ಚಲಿಸುತ್ತಿದ್ದ ಅಕ್ಟೀವಾ, ಸವಾರನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆ. ಕೂಡಲೇ ವಿರುದ್ಧ ಧಿಕ್ಕಿನಿಂದ ಬಂದ ಟಿಪ್ಪರ್ ಲಾರಿ ಇವರ ಮೇಲೆ ಹರಿದಿದೆ. ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಯುವಕ ತಂದೆ-ತಾಯಿ, ಇಬ್ಬರು ಸಹೋದರಿಯರು ಮತ್ತು ಓರ್ವ ಸಹೋದರನನ್ನು ಆಗಲಿದ್ದಾರೆ. ಮೃತದೇಹವು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.